ಬುಧವಾರ, ಆಗಸ್ಟ್ 10, 2022
20 °C

ಒಂಟಾರಿಯೊ: ಇಬ್ಬರು ಭಾರತೀಯ– ಕೆನಡಾ ರಾಜಕಾರಣಿಗಳಿಗೆ ಸಚಿವ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೊರೊಂಟೊ: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನಡೆದ ಸಂಪುಟ ಪುನಾರಚನೆಯಲ್ಲಿ ಇಬ್ಬರು ಭಾರತೀಯ – ಕೆನಡಾ ರಾಜಕಾರಣಿಗಳನ್ನು ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಈ ಇಬ್ಬರು ಭಾರತೀಯ – ಕೆನಡಾ ರಾಜಕಾರಣಿಗಳಾದ ಪರಮ್‌ ಗಿಲ್‌ ಮತ್ತು ನೀನಾ ತಂಗ್ರಿ ಅವರು ನೂತನ ಸಚಿವರಾಗಿ ನೇಮಕಗೊಂಡಿದ್ದಾರೆ. ಗಿಲ್ ಅವರಿಗೆ ಬಹುಸಂಸ್ಕೃತಿ ಮತ್ತು ಪೌರತ್ವ ಖಾತೆಯ ಸಚಿವರನ್ನಾಗಿ ಹಾಗೂ ಸಣ್ಣ ವ್ಯವಹಾರಗಳ ಖಾತೆಯನ್ನು ನೀನಾ ಅವರಿಗೆ ನೀಡಲಾಗಿದೆ.

ಒಂಟಾರಿಯೊ ಪ್ರೀಮಿಯರ್ ಡೌಗ್ ಫೋರ್ಡ್ ಅವರು ಶುಕ್ರವಾರ ತಮ್ಮ ಸಚಿವ ಸಂಪುಟವನ್ನು ಪುನರ್‌ ರಚಿಸಿದರು. ಕೋವಿಡ್‌–19 ಸಾಂಕ್ರಾಮಿಕದ ರಜೆಯ ನಂತರ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಾಡ್ ಫಿಲಿಪ್ಸ್ ಅವರು ಪುನಃ ಹೊಸ ಸಚಿವರಾಗಿ ನೇಮಕಗೊಂಡಿದ್ದಾರೆ. ಅವರೊಂದಿಗೆ ಇಬ್ಬರು ಭಾರತೀಯ ಕೆನಡಾ ರಾಜಕಾರಣಿಗಳು ನೂತನ ಸಚಿವರಾಗಿದ್ದಾರೆ. ಮುಂದಿನ ವರ್ಷ ಪ್ರಾಂತೀಯ ಚುನಾವಣೆ ನಡೆಯಲಿದ್ದು, ಇನ್ನೂ ಒಂದು ವರ್ಷ ಬಾಕಿ ಇದ್ದಂತೆಯೇ ಡೌಕ್ ಫೋರ್ಡ್‌ ಸಂಪುಟ ಪುನಾರಚನೆ ಮಾಡಿದ್ದಾರೆ.

ಹಿಂದಿನ ಸಂಪುಟದಲ್ಲಿ ಭಾರತೀಯ–ಕೆನಡಿಯನ್‌ ಪ್ರಭಮಿತ್ ಸರ್ಕಾರಿ ಅವರು ಸಚಿವರಾಗಿದ್ದರು. ಅವರಿಗೆ ಸಣ್ಣ ವ್ಯಾಪಾರ ಖಾತೆಯ ಸಹಾಯಕ ಸಚಿವರಾಗಿದ್ದರು. 30 ವರ್ಷದ ಸರ್ಕರಿಯಾ ಅವರು ಈಗ ಖಜಾನೆ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಅವರು ಒಂಟಾರಿಯೊದಲ್ಲಿ ಮೊದಲ ಸಿಖ್ ಕ್ಯಾಬಿನೆಟ್ ಮಂತ್ರಿ.

‘ಒಂಟಾರಿಯೊದ ಖಜಾನೆ ಮಂಡಳಿಯ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವುದು ಒಂದು ಗೌರವವಾಗಿದೆ‘ ಎಂದು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸರ್ಕರಿಯಾ ಟ್ವೀಟ್ ಮಾಡಿದ್ದಾರೆ. ಸರ್ಕರಿಯಾ ಅವರ ಪೋಷಕರು 1980 ರ ದಶಕದಲ್ಲಿ ಭಾರತದ ಪಂಜಾಬ್‌ನಿಂದ ಇಲ್ಲಿಗೆ ವಲಸೆ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು