ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಿಟನ್‌: ಮುಂದಿನ ವರ್ಷ ಆರ್ಥಿಕತೆ ಮತ್ತಷ್ಟು ಕುಸಿತ’

ಹಣಕಾಸು ಸಚಿವ ಹಂಟ್‌ ಎಚ್ಚರಿಕೆ
Last Updated 17 ನವೆಂಬರ್ 2022, 14:27 IST
ಅಕ್ಷರ ಗಾತ್ರ

ಲಂಡನ್‌: ದೇಶದ ಆರ್ಥಿಕತೆ ಮುಂದಿನ ವರ್ಷ ಮತ್ತಷ್ಟು ಕುಸಿಯುವ ಆತಂಕವಿದೆ ಎಂದು ಬ್ರಿಟನ್‌ ಹಣಕಾಸು ಸಚಿವಜೆರೆಮಿ ಹಂಟ್‌ ಗುರುವಾರ ಎಚ್ಚರಿಸಿದ್ದಾರೆ.

ಹದಗೆಟ್ಟಿರುವ ಸಾರ್ವಜನಿಕ ಹಣಕಾಸು ವ್ಯವಸ್ಥೆಗೆ ಪುನಶ್ಚೇತನ ನೀಡುವ ಮುನ್ನೋಟದ ಬಜೆಟ್‌ ಅನ್ನು ಮಂಡಿಸಿರುವ ಅವರು, ಆರ್ಥಿಕತೆ ಸುಧಾರಣೆಗೆ ಹೊಸ ಯೋಜನೆಯ ಭಾಗವಾಗಿ ಸಿರಿವಂತರಿಗೆ ಮತ್ತು ಇಂಧನ ಕಂಪನಿಗಳಿಗೆ ತೆರಿಗೆ ಹೆಚ್ಚಳ ಮಾಡಿದ್ದಾರೆ.

ವಿತ್ತೀಯ ಶಿಸ್ತಿಗಾಗಿ ಇಂತಹ ಕಠಿಣ ನೀತಿಗಳು ಅನಿವಾರ್ಯವೆಂದು ಅವರು ಸಮರ್ಥಿಸಿಕೊಂಡಿದ್ದಾರೆ.ದೇಶದ ಆರ್ಥಿಕತೆಯ ಸವಾಲುಗಳು ಹಾಗೂ ಅದರ ಪುನಶ್ಚೇತನಕ್ಕೆ ಕೈಗೊಳ್ಳಬೇಕಿರುವ ಕ್ರಮಗಳನ್ನೂ ಬಜೆಟ್‌ನಲ್ಲಿ ವಿವರಿಸಿದ್ದಾರೆ.

ಆದಾಯ ತೆರಿಗೆ ವಿನಾಯಿತಿಯನ್ನು ಸ್ಥಗಿತಗೊಳಿಸಲಾಗಿದೆ. ಆದಾಯ ತೆರಿಗೆಗೆ ನಿಗದಿಪಡಿಸಿದ್ದ ಮಿತಿಯನ್ನೂ ಮತ್ತಷ್ಟು ತಗ್ಗಿಸಲಾಗಿದೆ. ಪರಿಣಾಮ ಜನರು ಅತೀ ಹೆಚ್ಚಿನ ಪ್ರಮಾಣದಲ್ಲಿ ಆದಾಯ ತೆರಿಗೆ ಪಾವತಿಸಬೇಕಾಗಿದೆ.

ಹಂಟ್ ಅವರು ಮಂಡಿಸಿದ ಬಜೆಟ್‌ ಮೇಲೆ ಜನರು ವ್ಯಾಪಕ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ,ಮಾರುಕಟ್ಟೆಗಳಿಂದ ನಿರುತ್ಸಾಹ ವ್ಯಕ್ತವಾಯಿತು.ದೇಶದ ಕರೆನ್ಸಿ ಸ್ಟರ್ಲಿಂಗ್‌ ಮೌಲ್ಯ ಡಾಲರ್‌ ಎದುರು ಕುಸಿತ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT