ಶನಿವಾರ, ನವೆಂಬರ್ 26, 2022
23 °C

ಲೀಸ್ಟರ್‌ ಗಲಭೆಗೆ ಅನಿಯಂತ್ರಿತ ವಲಸೆ ಕಾರಣ: ಸುಯೆಲ್ಲಾ ಬ್ರೇವರ್‌ಮನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ‘ಇತ್ತೀಚೆಗೆ ಲೀಸ್ಟರ್‌ನಲ್ಲಿ ನಡೆದಿದ್ದ ಗಲಭೆಗೆ ಅನಿಯಂತ್ರಿತ ವಲಸೆ ಹಾಗೂ ಹೊಸದಾಗಿ ವಲಸೆ ಬಂದವರು ಸಮಾಜದಲ್ಲಿ ಒಂದಾಗಲು ವಿಫಲವಾಗಿದ್ದೇ ಕಾರಣ’ ಎಂದು ಬ್ರಿಟನ್‌ನ ಗೃಹ ಕಾರ್ಯದರ್ಶಿ, ಭಾರತೀಯ ಸಂಜಾತೆ ಸುಯೆಲ್ಲಾ ಬ್ರೇವರ್‌ಮನ್‌ ತಿಳಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕನ್ಸರ್ವೇಟಿವ್‌ ಪಕ್ಷದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಗಲಭೆ ಪೀಡಿತ ಲೀಸ್ಟರ್‌ಗೆ ಭೇಟಿ ನೀಡಿದ್ದೆ. ಹೊಸದಾಗಿ ವಲಸೆ ಬಂದವರು ಮುಖ್ಯವಾಹಿನಿಯಲ್ಲಿ ಒಂದಾಗುವಲ್ಲಿ ವಿಫಲವಾಗಿರುವುದು ಆಗ ಮನದಟ್ಟಾಗಿತ್ತು. ಇಂತಹ ಬಿಕ್ಕಟ್ಟಿಗೆ ಬ್ರಿಟನ್‌ನಲ್ಲಿ ಅವಕಾಶವಿಲ್ಲ’ ಎಂದಿದ್ದಾರೆ.

‘ದೇಶಕ್ಕೆ ವಲಸೆ ಬರುವವರನ್ನು ನಿಯಂತ್ರಿಸಬೇಕಿದೆ. ಕೌಶಲಗಳನ್ನು ಹೊಂದಿರದ ವಿದೇಶಿ ಕೆಲಸಗಾರರ ಮೇಲೆ ಕಡಿವಾಣ ಹಾಕಬೇಕಿದೆ. 1960ರಲ್ಲಿ ನನ್ನ ಪಾಲಕರು ಕೀನ್ಯಾ ಮತ್ತು ಮಾರಿಷಸ್‌ನಿಂದ ಬ್ರಿಟನ್‌ಗೆ ವಲಸೆ ಬಂದರು. ಅವರು ಈ ದೇಶವನ್ನು ಪ್ರೀತಿಸಿದರು. ಅವರಿಗೆ ಈ ರಾಷ್ಟ್ರವು ಭದ್ರತೆ ಹಾಗೂ ಅವಕಾಶಗಳನ್ನು ಒದಗಿಸಿತ್ತು’ ಎಂದು ಹೇಳಿದ್ದಾರೆ.

‘ನಮ್ಮ ನೆಲದಲ್ಲಿ ಆಶ್ರಯ ಪಡೆದು ನಮ್ಮ ವ್ಯವಸ್ಥೆಯನ್ನೇ ಟೀಕಿಸುವ ಅನೇಕರು ದೇಶದಲ್ಲಿದ್ದಾರೆ’ ಎಂದೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು