ಭಾನುವಾರ, ಏಪ್ರಿಲ್ 2, 2023
33 °C

ಬ್ರಿಟನ್‌ನಲ್ಲಿ ಮತ್ತೆ ಶುರು ರಾಜೀನಾಮೆ ಪರ್ವ: ಒತ್ತಡದಲ್ಲಿ ಪ್ರಧಾನಿ ಸುನಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ (ಪಿಟಿಐ): ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಆಪ್ತರಲ್ಲಿ ಒಬ್ಬರಾದ ಸಚಿವ ಸರ್‌ ಗೆವಿನ್‌ ವಿಲಿಯಮ್ಸನ್‌ ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ. ಇದರಿಂದ ಸುನಕ್‌ ಪ್ರತಿಪಕ್ಷಗಳ ವಾಗ್ದಾಳಿಯ ಒತ್ತಡಕ್ಕೆ ಸಿಲುಕಿದ್ದಾರೆ. 

ಪಕ್ಷದ ಮುಖ್ಯ ಸಚೇತಕಿ ವೆಂಡಿ ಮೋರ್ಟನ್‌ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿದ ಪ್ರಕರಣದ ವಿಚಾರಣೆ ಬಾಕಿ ಇರುವಾಗಲೇ ಗೆವಿನ್‌ ವಿಲಿಯಮ್ಸನ್‌ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಸುನಕ್‌ ಅವರಿಗೆ ರಾಜೀನಾಮೆ ಸಲ್ಲಿಸಿದ ನಂತರ ವಿಲಿಯಮ್ಸನ್‌ ಅವರು ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸುನಕ್‌ ಸಂಪುಟದಲ್ಲಿ ಖಾತೆ ರಹಿತ ಸಚಿವರಾಗಿದ್ದ ಸರ್ ಗೆವಿನ್ ವಿಲಿಯಮ್ಸನ್ ವಿರುದ್ಧ ಕನ್ಸರ್ವೇಟಿವ್ ಪಕ್ಷದ ಸಹೋದ್ಯೋಗಿಗಳು ಮತ್ತು ಪೌರಕಾರ್ಮಿಕರು ಅಸಭ್ಯ ವರ್ತನೆಯ ಆರೋಪ ಹೊರಿಸಿದ್ದರು. ಇದು ಪ್ರಕರಣ ವಿಚಾರಣೆಗೆ ಬಾಕಿ ಇದೆ. 

ವಿಲಿಯಮ್ಸನ್‌ ಅವರ ರಾಜೀನಾಮೆ ಸ್ವೀಕರಿಸಿದ ನಂತರ ಸುನಕ್‌ ಅವರು, ‘ಬಹಳ ದುಃಖದಿಂದ ರಾಜೀನಾಮೆ ಸ್ವೀಕರಿಸಿವೆ. ಅವರು ನೀಡುತ್ತಿರುವ ವೈಯಕ್ತಿಕ ಬೆಂಬಲ ಮತ್ತು ನಿಷ್ಠೆಗಾಗಿ ನಾನು ಧನ್ಯವಾದ ಅರ್ಪಿಸುವೆ. ಕನ್ಸರ್ವೇಟಿವ್ ಸರ್ಕಾರಗಳ ಸತತ ಯಶಸ್ಸಿನಲ್ಲಿ ಅವರ ಬದ್ಧತೆ ಮತ್ತು ಪಕ್ಷ ನಿಷ್ಠೆ ಅಚಲವಾಗಿದೆ’ ಎಂದು ಹೇಳಿದ್ದಾರೆ.

ಕನ್ಸರ್ವೇಟಿವ್‌ ಪಕ್ಷದ ರಾಜೀನಾಮೆ ಸರಣಿಯನ್ನು ಸುನಕ್‌ ಅವರ ಕಳಪೆ ತೀರ್ಮಾನ ಮತ್ತು ನಾಯಕತ್ವಕ್ಕೆ ತಳುಕು ಹಾಕಿ ಟೀಕಾಪ್ರಹಾರ ನಡೆಸಲು ಪ್ರತಿಪಕ್ಷ ಲೇಬರ್‌ ಪಕ್ಷದ ನಾಯಕ ಸರ್‌ ಕೀರ್‌ ಸ್ಟಾರ್‌ಮರ್‌ ಸಜ್ಜಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು