ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಿಟನ್‌ನಲ್ಲಿರುವ ಮುಸ್ಲಿಮರಲ್ಲಿ ಭಾರತ ವಿರೋಧಿ ಭಾವನೆ ಕೆರಳಿಸಲು ಪಾಕ್ ಯತ್ನ’

ಕಾಶ್ಮೀರ, ಖಾಲಿಸ್ತಾನ ವಿಷಯಗಳೇ ಅಸ್ತ್ರ; ಬ್ರಿಟನ್ ಸರ್ಕಾರದ ವರದಿಯಲ್ಲಿ ಎಚ್ಚರಿಕೆ
Last Updated 10 ಫೆಬ್ರವರಿ 2023, 12:42 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನಲ್ಲಿರುವ ಮುಸ್ಲಿಮರಲ್ಲಿ ಭಾರತ ವಿರೋಧಿ ಭಾವನೆ ಕೆರಳಿಸುವ ಕಾರ್ಯದಲ್ಲಿ ಪಾಕಿಸ್ತಾನ ತೊಡಗಿದೆ. ಕಾಶ್ಮೀರ ಹಾಗೂ ಖಾಲಿಸ್ತಾನ ವಿಷಯಗಳನ್ನು ಮುಂದಿಟ್ಟುಕೊಂಡು, ಮುಸ್ಲಿಮರನ್ನು ಉಗ್ರಗಾಮಿಗಳಾಗುವಂತೆ ಪ್ರಚೋದಿಸುವ ಕೃತ್ಯಗಳು ನಡೆಯುತ್ತಿವೆ ಎಂದು ಬ್ರಿಟನ್ ಸರ್ಕಾರ ಸಿದ್ಧಪಡಿಸಿರುವ ವರದಿಯೊಂದರಲ್ಲಿ ಎಚ್ಚರಿಸಲಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸುಗಳನ್ನು ಈ ವರದಿ ಒಳಗೊಂಡಿದೆ.

‘ಇಸ್ಲಾಮಿಕ್‌ ಭಯೋತ್ಪಾದನೆ ಹೆಚ್ಚುತ್ತಿದ್ದು, ದೇಶಕ್ಕೆ ಅಪಾಯವನ್ನೊಡ್ಡಿದೆ’ ಎಂದಿರುವ ವರದಿ, ಭಯೋತ್ಪಾದನೆಯನ್ನು ನಿಗ್ರಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ.

‘ಬ್ರಿಟನ್‌ನಲ್ಲಿ ಖಾಲಿಸ್ತಾನ ಪರ ಗುಂಪುಗಳಿವೆ. ಈ ಗುಂಪುಗಳ ಸದಸ್ಯರ ಸಂಖ್ಯೆಯೂ ಕಡಿಮೆ ಇದೆ. ಆದರೆ, ಈ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ತೀವ್ರಗಾಮಿಗಳಾಗುವಂತೆ ಮಾಡಲಾಗುತ್ತಿದೆ’ ಎಂದು ‘ಸಾರ್ವಜನಿಕ ನೇಮಕಾತಿಗಳ’ ಆಯುಕ್ತ ವಿಲಿಯಮ್ಸ್ ಶಾಕ್ರಾಸ್ ಎಚ್ಚರಿಸಿದ್ದಾರೆ.

‘ಕಾಶ್ಮೀರದಲ್ಲಿ ಹಿಂಸಾಚಾರ ನಡೆಸುವಂತೆ ಪಾಕಿಸ್ತಾನ ಮೂಲದ ಧರ್ಮಗುರುವೊಬ್ಬರು ಹಾಗೂ ಬ್ರಿಟನ್‌ನಲ್ಲಿರುವ ತೀವ್ರಗಾಮಿಗಳ ಗುಂಪುಗಳು ಕರೆ ನೀಡುತ್ತಿರುವ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ. ಕಾಶ್ಮೀರ ವಿಷಯ ಮುಂದಿಟ್ಟುಕೊಂಡು ನಡೆದ ಪ್ರತಿಭಟನೆಗಳ ಬಗ್ಗೆ ಬ್ರಿಟನ್‌ನಲ್ಲಿರುವ ಮುಸ್ಲಿಮರು ಹೆಚ್ಚು ಆಸಕ್ತಿ ತೋರುತ್ತಿರುವುದನ್ನು ಕಂಡಿದ್ದೇನೆ. ಪ್ರತಿಭಟನೆ ನಡೆದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದನ್ನು ಸಹ ಗಮನಿಸಿದ್ದೇನೆ’ ಎಂದು ಶಾಕ್ರಾಸ್‌ ಅವರು ಈ ವರದಿಯಲ್ಲಿ ಹೇಳಿದ್ದಾರೆ.

‘ಇಸ್ಲಾಂ ಮೂಲಭೂತವಾದವನ್ನು ನಿಗ್ರಹಿಸುವುದು ಮುಸ್ಲಿಂ ವಿರೋಧಿ ಎನಿಸದು. ಹೀಗಾಗಿ, ಇಲ್ಲಿನ ಕೆಲ ಮುಸ್ಲಿಮರು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗುವುದನ್ನು ತಡೆಯಲು ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಜರುಗಿಸಬೇಕು’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT