ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ ನಡುವೆ ‘ಔಕಸ್‌‘ ಮೈತ್ರಿ ಸ್ಥಾಪನೆ

Last Updated 16 ಸೆಪ್ಟೆಂಬರ್ 2021, 8:35 IST
ಅಕ್ಷರ ಗಾತ್ರ

ಲಂಡನ್/ವಾಷಿಂಗ್ಟನ್ (ಪಿಟಿಐ): ಹಿಂದೂ ಮಹಾಸಾಗರ– ಪೆಸಿಫಿಕ್‌ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾಗಳು ‘ಔಕಸ್‌’(AUKUS) ಹಸರಿನಲ್ಲಿ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಘೋಷಿಸಿವೆ.

ಹಿಂದೂ ಮಹಾಸಾಗರ– ಪೆಸಿಫಿಕ್‌ ಪ್ರದೇಶದಲ್ಲಿ ತಮ್ಮ ಪಾಲುದಾರಿಕೆಯ ರಕ್ಷಣೆ, ಪರಮಾಣು– ಚಾಲಿತ ಜಲಾಂತರ್ಗಾಮಿಗಳ ಅಭಿವೃದ್ಧಿಗೆ ಆಸ್ಟ್ರೇಲಿಯಾಗೆ ನೆರವು ನೀಡುವುದೂ ಸೇರಿದಂತೆ ಹೆಚ್ಚಿನ ರಕ್ಷಣಾ ಸಾಮರ್ಥ್ಯಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಈ ಮೈತ್ರಿ ಕಲ್ಪಿಸುತ್ತದೆ. ಆಯಕಟ್ಟಿನ ಪ್ರದೇಶದ ಮೇಲೆ ಚೀನಾದ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಮೂರು ದೇಶಗಳು ಹೊಸ ಮೈತ್ರಿ ಮಾಡಿಕೊಂಡಿವೆ.

ಮೂರು ದೇಶಗಳು ಜಂಟಿಯಾಗಿ ಬುಧವಾರ ಈ ಮೈತ್ರಿಯನ್ನು ಘೋಷಿಸಿದ್ದು, ಇದನ್ನು ‘ಮೈಲಿಗಲ್ಲು’ ಎಂದು ಕರೆದುಕೊಂಡಿವೆ.

ಈ ನೂತನ ಮೈತ್ರಿಯ ಅಡಿಯಲ್ಲಿ ಮೂರು ರಾಷ್ಟ್ರಗಳು ತಂತ್ರಜ್ಞಾನ, ಭದ್ರತೆ ಮತ್ತು ರಕ್ಷಣಾ ಸಂಬಂಧಿತ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕಾ ನೆಲೆಗಳು ಮತ್ತು ಪೂರೈಕೆ ಸರಪಳಿಗಳ ಕುರಿತು ಪರಸ್ಪರ ಸಹಕಾರ ನೀಡಲಿವೆ.

ಮೈತ್ರಿಯ ಭಾಗವಾಗಿ ಮೊದಲಿಗೆ, ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿಕೊಳ್ಳಲು ಆಸ್ಟ್ರೇಲಿಯಾಗೆ ಅಮೆರಿಕ ಮತ್ತು ಬ್ರಿಟನ್‌ ನೆರವು ನೀಡಲಿವೆ. ಇದು ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

‘ಬ್ರಿಟನ್‌, ಆಸ್ಟ್ರೇಲಿಯಾ ಮತ್ತು ಅಮೆರಿಕ ಸಹಜ ಮಿತ್ರರಾಷ್ಟ್ರಗಳಾಗಿವೆ. ಭೌಗೋಳಿಕವಾಗಿ ನಾವು ಬೇರ್ಪಟ್ಟಿರಬಹುದು, ಆದರೆ ನಮ್ಮ ಆಸಕ್ತಿಗಳು ಮತ್ತು ಮೌಲ್ಯಗಳು ಪರಸ್ಪರರ ನಡುವೆ ಹಂಚಿಕೆಯಾಗಿವೆ’ ಎಂದು ಮೂರೂ ದೇಶಗಳ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ.

ಹೊಸ ಮೈತ್ರಿ ಘೋಷಣಾ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಆಸ್ಟ್ರೇಲಿಯಾ ಪ್ರಧಾನ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT