ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಸಮೇತ ನನ್ನನ್ನು ಸೆರೆಹಿಡಿಯಲು ಬಂದಿದ್ದ ರಷ್ಯಾ ಸೇನೆ: ಝೆಲೆನ್‌ಸ್ಕಿ

Last Updated 29 ಏಪ್ರಿಲ್ 2022, 15:42 IST
ಅಕ್ಷರ ಗಾತ್ರ

ಕೀವ್: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ರಷ್ಯಾದ ಪಡೆಗಳು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸೆರೆ ಹಿಡಿಯಲು ತುಂಬಾ ಸಮೀಪಕ್ಕೆ ಬಂದಿದ್ದವು ಎಂದು ಹೇಳಿದ್ದಾರೆ.

ಉಕ್ರೇನ್ ಯುದ್ಧದ ಆರಂಭಿಕ ದಿನಗಳ ತೀವ್ರತೆಯನ್ನು ನೆನಪಿಸಿಕೊಳ್ಳುತ್ತಾ ಅವರು ಟೈಮ್ ನಿಯತಕಾಲಿಕೆಯೊಂದಿಗೆ ಮಾತನಾಡುವಾಗ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನಾನು ಮತ್ತು ಪತ್ನಿ ಒಲೆನಾ ಝೆಲೆನ್‌ಸ್ಕಿ, ಮಲಗಿದ್ದ 17 ವರ್ಷದ ಮಗಳು ಮತ್ತು 9 ವರ್ಷದ ಮಗನನ್ನು ಎಬ್ಬಿಸಿ ಬಾಂಬ್ ದಾಳಿ ಆರಂಭವಾಗಿದೆ ಎಂದು ಹೇಳಿದ್ದೆವು ಎಂದು ಆ ಭೀಕರ ಕ್ಷಣಗಳನ್ನು ನೆನಪಿಸಿಕೊಂಡ ಝೆಲೆನ್‌ಸ್ಕಿ, ಆಗ ಹೊರಗಡೆ ಶಬ್ಧ ಜೋರಾಗಿತ್ತು. ಅಲ್ಲಿ ಸ್ಫೋಟಗಳು ಸಂಭವಿಸಿದ್ದವು' ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಆ ವೇಳೆಗಾಗಲೇ ತನ್ನನ್ನು ಗುರಿಯಾಗಿಸಿಕೊಂಡಿದ್ದರು ಮತ್ತು ಕಚೇರಿಗಳು ಸುರಕ್ಷಿತ ಸ್ಥಳವಲ್ಲ ಎಂದು ಶೀಘ್ರದಲ್ಲೇ ಸ್ಪಷ್ಟವಾಯಿತು. ಅವರನ್ನು ಮತ್ತು ಅವರ ಕುಟುಂಬದವರನ್ನು ಕೊಲ್ಲಲು ಅಥವಾ ಸೆರೆಹಿಡಿಯಲು ರಷ್ಯಾದ ಪಡೆಗಳು ಕೀವ್‌ಗೆ ಧುಮುಕಿರುವುದಾಗಿ ನನಗೆ ಮಾಹಿತಿ ದೊರಕಿತು ಎಂದು ಹೇಳಿದ್ದಾರೆ.

'ಆ ರಾತ್ರಿಗೂ ಮುನ್ನ ನಾವು ಅಂತಹ ವಿಷಯಗಳನ್ನು ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದೆವು' ಎಂದು ಝೆಲೆನ್‌ಸ್ಕಿ ಅವರ ಸಿಬ್ಬಂದಿ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಟೈಮ್‌ಗೆ ತಿಳಿಸಿದರು.

ಹಿಂದಿನ ಪ್ರವೇಶದ್ವಾರದಲ್ಲಿನ ಒಂದು ಗೇಟ್ ಅನ್ನು ಪೋಲಿಸ್ ಬ್ಯಾರಿಕೇಡ್‌ಗಳು ಮತ್ತು ಪ್ಲೈವುಡ್ ಬೋರ್ಡ್‌ಗಳ ರಾಶಿಯಿಂದ ನಿರ್ಬಂಧಿಸಲಾಗಿತ್ತು. ಇದು ಕೋಟೆಗಿಂತ ಹೆಚ್ಚಿನ ಭದ್ರತೆಯನ್ನು ಒಳಗೊಂಡ ರದ್ದಿ ದಿಬ್ಬವಾಗಿ ಮಾರ್ಪಟ್ಟಿತ್ತು. ರಷ್ಯಾದ ದಾಳಿಯ ಮೊದಲ ರಾತ್ರಿಯಲ್ಲಿ ಲೈಟ್‌ಗಳನ್ನು ಆಫ್ ಮಾಡಲಾಯಿತು ಮತ್ತು ಝೆಲೆನ್‌ಸ್ಕಿ ಮತ್ತು ಅವರ ಸಹಾಯಕರಿಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಮತ್ತು ಆಕ್ರಮಣಕಾರಿ ರೈಫಲ್‌ಗಳನ್ನು ಕಟ್ಟಡದೊಳಗೆ ಭದ್ರತಾ ಸಿಬ್ಬಂದಿ ತಂದರು ಎಂದು ತಿಳಿಸಿದರು.

ಉಕ್ರೇನ್‌ನ ಮಿಲಿಟರಿ ಗುಪ್ತಚರ ಸೇವೆಯ ಹಿರಿಯ ಅಧಿಕಾರಿ ಓಲೆಕ್ಸಿ ಅರೆಸ್ಟೋವಿಚ್, ಈ ದೃಶ್ಯವು 'ವಿಚಿತ್ರವಾಗಿತ್ತು' ಮತ್ತು ಝೆಲೆನ್‌ಸ್ಕಿ ಹೆಂಡತಿ ಮತ್ತು ಮಕ್ಕಳು ಇನ್ನೂ ಅಲ್ಲಿದ್ದಾಗ ರಷ್ಯಾದ ಪಡೆಗಳು ಎರಡು ಬಾರಿ ಕಾಂಪೌಂಡ್‌ಗೆ ದಾಳಿ ಮಾಡಲು ಯತ್ನಿಸಿದವು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT