ಮಂಗಳವಾರ, ಮಾರ್ಚ್ 28, 2023
31 °C

ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿ: 40ಕ್ಕೇರಿದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀವ್‌(ಎಪಿ) ಉಕ್ರೇನ್‌ನ ನಿಪ್ರೊ ನಗರದ ಗೋಪುರ ಅ‍ಪಾರ್ಟ್‌ಮೆಂಟ್‌ ಮೇಲೆ ರಷ್ಯಾ ಶನಿವಾರ ತಡರಾತ್ರಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮಡಿದವರ ಸಂಖ್ಯೆ ಸೋಮವಾರ 40ಕ್ಕೆ ತಲುಪಿದೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ.

1,700 ನಿವಾಸಿಗಳು ವಾಸವಿದ್ದ ಅ‍ಪಾರ್ಟ್‌ಮೆಂಟ್‌ ಗುರಿಯಾಗಿಸಿ ರಷ್ಯಾ ಸೇನೆ ಕೆಎಚ್‌–22 ಕ್ಷಿಪಣಿಯನ್ನು ಕರ್ಸ್ಕ್‌ ಪ್ರದೇಶದಿಂದ ಉಡಾಯಿಸಿತ್ತು. ಸೋಮವಾರ ಕೆರ್ಸಾನ್, ಝಪೊರಿಝಿಯಾ ನಗರಗಳ ಮೇಲೆ ರಷ್ಯಾ ಪಡೆಗಳು ಶೆಲ್‌ ದಾಳಿ ಮುಂದುವರಿಸಿವೆ.

ಉಕ್ರೇನ್‌ ಮೇಲಿನ ಯುದ್ಧ 11 ತಿಂಗಳಿಗೆ ಮುಂದುವರಿದಿರುವಾಗ, ಉಕ್ರೇನ್‌ ನೆಲದಲ್ಲಿ ದೀರ್ಘಾವಧಿ ಯುದ್ಧಕ್ಕೆ ರಷ್ಯಾ ತಯಾರಿ ನಡೆಸುತ್ತಿದೆ ಎನ್ನುವುದನ್ನು ಈ ದಾಳಿಗಳು ಸೂಚಿಸುತ್ತವೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳ ತಜ್ಞರು ವಿಶ್ಲೇಷಿಸಿದ್ದಾರೆ.

ಉಕ್ರೇನ್‌ನಿಂದ ಕಪ್ಪು ಸಮುದ್ರದ ಮೇಲೆ ಹಾರಿ ಬಂದ ಏಳು ಡ್ರೋನ್‌ಗಳನ್ನು ಕ್ರಿಮಿಯಾ ದ್ವೀಪದ ಸೆವಾಸ್ಟೊ‍ಪೊಲ್‌ ಬಂದರಿನ ಬಳಿ ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಸ್ಥಾಪಿತ ಆಡಳಿತ ಮುಖ್ಯಸ್ಥ ಮಿಖಾಯಿಲ್‌ ರಜ್ವೊಝಾಯೆವ್‌ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು