ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ನಡೆಗಳು ‘ನರಮೇಧ’ದ ಲಕ್ಷಣಗಳನ್ನು ಹೊಂದಿವೆ: ಉಕ್ರೇನ್‌ ಅಧ್ಯಕ್ಷ

Last Updated 27 ಫೆಬ್ರುವರಿ 2022, 10:49 IST
ಅಕ್ಷರ ಗಾತ್ರ

ಕೀವ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾದ ಮತದಾನದ ಹಕ್ಕನ್ನು ರದ್ದುಗೊಳಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾನುವಾರ ಒತ್ತಾಯಿಸಿದ್ದಾರೆ.

ಈ ಕುರಿತು ಕಿರು ವಿಡಿಯೊವೊಂದನ್ನು ಹಂಚಿಕೊಂಡಿರುವ ಅವರು, ಉಕ್ರೇನ್‌ ವಿರುದ್ಧದ ರಷ್ಯಾದ ನಡೆಗಳು ‘ನರಮೇಧ’ದ ಲಕ್ಷಣಗಳನ್ನು ಹೊಂದಿವೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

‘ಇದು(ರಷ್ಯಾದ ಆಕ್ರಮಣ) ಭಯೋತ್ಪಾದನೆ. ಅವರು(ರಷ್ಯಾ ಸೈನಿಕರು) ನಮ್ಮ ಉಕ್ರೇನ್‌ ನಗರಗಳಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲು ಹೊರಟಿದ್ದಾರೆ. ಅವರು ನಮ್ಮ ಮಕ್ಕಳನ್ನು ಕೊಲ್ಲಲು ಬಯಸಿದ್ದಾರೆ. ನಮ್ಮ ನೆಲದೊಳಗೆ ನುಗ್ಗಿರುವ ದುಷ್ಟ ಸಂತಾನ ನಾಶವಾಗಬೇಕಿದೆ’ ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಪುಟಿನ್‌ ಸರ್ಕಾರ ಆದೇಶ ನೀಡಿದೆ.

ರಷ್ಯಾ ಆಕ್ರಮಣವನ್ನು ಅನೇಕ ಪಾಶ್ಚಿಮಾತ್ಯ ನಾಯಕರು ವಿರೋಧಿಸಿದ್ದಾರೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT