ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಮಹಾಪ್ರಧಾನ ಕಾರ್ಯದರ್ಶಿ ಆಯ್ಕೆಗೆ ಚಾಲನೆ ನೀಡಿದ ವಿಶ್ವಸಂಸ್ಥೆ

Last Updated 6 ಫೆಬ್ರುವರಿ 2021, 10:42 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ವಿಶ್ವಸಂಸ್ಥೆ ತನ್ನ ಮುಂದಿನ ಮಹಾಪ್ರಧಾನ ಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

193 ಸದಸ್ಯ ರಾಷ್ಟ್ರಗಳಿಗೆ ಪತ್ರ ಬರೆದಿರುವ ವಿಶ್ವಸಂಸ್ಥೆ, ಈ ಮಹತ್ವದ ಹುದ್ದೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವಂತೆ ಕೋರಿದೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಅಧ್ಯಕ್ಷ ವೋಲ್ಕನ್‌ ಬೊಜ್ಕಿರ್‌, ಭದ್ರತಾ ಮಂಡಳಿಯ ಈ ತಿಂಗಳ ಅವಧಿಗೆ ಅಧ್ಯಕ್ಷರಾಗಿರುವ ಬ್ರಿಟನ್‌ನ ರಾಯಭಾರಿ ಬಾರ್ಬರಾ ವುಡ್‌ವರ್ಡ್‌ ಅವರು, ಮಹಾಪ್ರಧಾನ ಕಾರ್ಯದರ್ಶಿ ಆಯ್ಕೆಗೆ ಸಂಬಂಧಿಸಿದ ಪತ್ರಕ್ಕೆ ಸಹಿ ಹಾಕುವ ಮೂಲಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ಪ್ರಸ್ತುತ ಮಹಾಪ್ರಧಾನ ಕಾರ್ಯದರ್ಶಿಯಾಗಿರುವ ಆಂಟೊನಿಯೊ ಗುಟೆರಸ್‌ ಅವರ ಅಧಿಕಾರಾವಧಿ ಡಿ. 31ಕ್ಕೆ ಕೊನೆಗೊಳ್ಳುವುದು.ಎರಡನೇ ಅವಧಿಗೆ ಇದೇ ಹುದ್ದೆಯಲ್ಲಿ ಮುಂದುವರಿಸುವಂತೆ ಅವರು ಮನವಿ ಮಾಡಿದ್ದಾರೆ.

ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಈವರೆಗೆ ಮಹಿಳೆಯನ್ನು ಆಯ್ಕೆ ಮಾಡಿಲ್ಲ. ಈ ಬಾರಿಯಾದರೂ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಕೋರಿ ವಿಶ್ವಸಂಸ್ಥೆಯಲ್ಲಿ ಹಾಂಡುರಾಸ್‌ನ ರಾಯಭಾರಿಯಾಗಿರುವ ಮೇರಿ ಎಲಿಜಬೆತ್‌ ಫ್ಲೋರ್ಸ್‌ ಫ್ಲೇಕ್‌ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT