ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷಿಯ | ಭೂಕಂಪ: ಕೆಲ ಮನೆಗಳಿಗೆ ಭಾಗಶಃ ಹಾನಿ

Last Updated 10 ಏಪ್ರಿಲ್ 2021, 13:18 IST
ಅಕ್ಷರ ಗಾತ್ರ

ಮಲಂಗ್, ಇಂಡೊನೇಷಿಯ: ಇಂಡೊನೇಷ್ಯಾದ ದ್ವೀಪ ಪ್ರದೇಶ ಜಾವಾದಲ್ಲಿ ಶನಿವಾರ ಸಮುದ್ರದ ಆಳದಲ್ಲಿ ಭೂಕಂಪನ ಸಂಭವಿಸಿದೆ. ಇದರಿಂದಾಗಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಅಂತಹ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಭೂವೈಜ್ಞಾನಿಕ ಸರ್ವೇ ಪ್ರಕಾರ, ಭೂಕಂಪನವು 82 ಕಿ.ಮೀ. ಅಳದಲ್ಲಿ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.0 ರಷ್ಟಿತ್ತು. ಇದರ ಕೇಂದ್ರ ಸ್ಥಾನದ ಪೂರ್ವ ಜಾವಾ ಪ್ರಾಂತ್ಯದ ಮಲಂಗ್ ಜಿಲ್ಲೆ ಆಗಿತ್ತು.

ಇಂಡೊನೇಷ್ಯಾದ ಭೂಕಂಪನ ಮತ್ತು ಸುನಾಮಿ ಕೇಂದ್ರದ ಮುಖ್ಯಸ್ಥರಾದ ರಹಮತ್ ಟ್ರಿಯೊನೊ ಅವರು, ಭೂಕಂಪನ ಸುನಾಮಿ ಮೂಡಿಸುವಷ್ಟು ಪರಿಣಾಮಕಾರಿ ಆಗಿದ್ದಿರಲಿಲ್ಲ. ಆದರೂ, ಭೂಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಇಳಿಜಾರು ಪ್ರದೇಶ, ಸಡಿಲ ಮಣ್ಣು, ಬಂಡೆ ಇರುವೆಡೆಯಿಂದ ದೂರ ಇರಲು ಸೂಚಿಸಿಸಲಾಗಿದೆ ಎಂದಿದ್ದಾರೆ.

ಆದರೆ, ಭೂಕಂಪನದಿಂದಾಗಿ ಮಲಂಗ್‌ ನಗರದಲ್ಲಿ ಆಸ್ಪತ್ರೆ ಕಟ್ಟಡ ಹಾನಿಗೊಳಲಾಗಿರುವ ಚಿತ್ರವನ್ನು ಇಲಾಖೆ ಬಿಡುಗಡೆ ಮಾಡಿದೆ. ವಿವಿಧ ಮನೆಗಳು ಕೂಡಾ ಭಾಗಶಃ ಹಾನಿಗೊಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT