ಸೋಮವಾರ, ಆಗಸ್ಟ್ 15, 2022
22 °C

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಪುನರಾಯ್ಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಪುನರಾಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಹುದ್ದೆ ವಹಿಸಲಿದ್ದಾರೆ.

ಶುಕ್ರವಾರದಂದು 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುಟೆರೆಸ್ ಅವರನ್ನು ಆಯ್ಕೆ ಮಾಡಲಾಯಿತು.

'ಬಲಿಷ್ಠ ಹಾಗೂ ಸಣ್ಣ ರಾಷ್ಟ್ರಗಳ ನಡುವಣ ನಂಬಿಕೆಯನ್ನು ಖಾತ್ರಿಪಡಿಸಲು, ಸೇತುವೆ ನಿರ್ಮಿಸಲು ಮತ್ತು ನಂಬಿಕೆಯನ್ನು ಬೆಳೆಸಲು ನಿರಂತರವಾಗಿ ತೊಡಗಿಸಿಕೊಳ್ಳುವುದಾಗಿ' ಪ್ರಮಾಣ ವಚನ ಸ್ವೀಕರಿಸದ ಬಳಿಕ ಗುಟೆರೆಸ್ ತಿಳಿಸಿದ್ದಾರೆ.

ಇದನ್ನೂ ಓದಿ: 

ಈ ಮೊದಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಲು 15 ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಶಿಫಾರಸುಗೈದಿತ್ತು.

ಬಾನ್ ಕಿ ಮೂನ್ ಉತ್ತರಾಧಿಕಾರಿಯಾಗಿ ಹಾಗೂ ವಿಶ್ವಸಂಸ್ಥೆಯ ಒಂಬತ್ತನೇ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರೆಸ್ ಅವರು 2017ರ ಜನವರಿ 1ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಮೊದಲ ಅಧಿಕಾರವಧಿಯು ಡಿಸೆಂಬರ್ 31ರಂದು ಕೊನೆಗೊಳ್ಳುತ್ತದೆ. ಬಳಿಕ ಎರಡನೇ ಅವಧಿಯು 2022ರ ಜನವರಿ 1ರಿಂದ ಆರಂಭವಾಗಲಿದೆ.

72 ವರ್ಷದ ಗುಟೆರೆಸ್ 1995ರಿಂದ 2002ರ ವರೆಗೆ ಪೋರ್ಚುಗಲ್‌ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2005ರಿಂದ 2015ರ ವರೆಗೆ ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರ ಹೈಕಮಿಷನರ್ ಆಗಿ ಕೆಲಸ ನಿರ್ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು