ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿವಾಹಿತ ಮಗಳು ತನ್ನ ಮದುವೆ ಖರ್ಚನ್ನು ಪೋಷಕರಿಂದ ಪಡೆಯಬಹುದು: ಹೈಕೋರ್ಟ್

ಕೌಟುಂಬಿಕ ನ್ಯಾಯಾಲಯದಲ್ಲಿ ಸೋತಿದ್ದ ಮಗಳಿಗೆ ಜಯ
Last Updated 31 ಮಾರ್ಚ್ 2022, 15:43 IST
ಅಕ್ಷರ ಗಾತ್ರ

ರಾಯಪುರ: 'ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ- 1956'ರ ಅಡಿ ಅವಿವಾಹಿತ ಪುತ್ರಿಯು ತನ್ನ ಪೋಷಕರಿಂದ ತನ್ನ ಮದುವೆ ಖರ್ಚನ್ನು ಪಡೆಯಲು ಅವಕಾಶವಿದೆ ಎಂದು ಛತ್ತೀಸಗಡ ಹೈಕೋರ್ಟ್ ಪ್ರತಿಪಾದಿಸಿದೆ.

ಛತ್ತೀಸಗಡದ ದುರ್ಗ ಜಿಲ್ಲೆಯ 35 ವರ್ಷದ ರಾಜೇಶ್ವರಿ ಎಂಬ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್‌ನ ಬಿಲಾಸ್‌ಪುರ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಭದೂರಿ ಹಾಗೂ ಸಂಜಯ್ ಎಸ್. ಅಗರ್‌ವಾಲ್ ಅವರಿದ್ದ ಪೀಠವು, '1956ರ ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ' ಪ್ರಕಾರ ಅವಿವಾಹಿತ ಯುವತಿ ತನ್ನ ಪೋಷಕರಿಂದ ಮದುವೆಯ ಖರ್ಚು ಪಡೆಯಲು ಅವಕಾಶವಿದೆ ಎಂಬ ವಕೀಲರ ವಾದವನ್ನು ಪುಷ್ಟೀಕರಿಸಿತು.

ಈ ಮೂಲಕ 2016ರ ಏಪ್ರಿಲ್ 22ರಂದು ದುರ್ಗ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಏನಿದು ಪ್ರಕರಣ?:ಭಿಲಾಯ್ ಉಕ್ಕು ಘಟಕದ ಉದ್ಯೋಗಿಯಾದ ಭಾನುರಾಮ್ ಅವರ ಪುತ್ರಿಯಾದ ರಾಜೇಶ್ವರಿ ಅವರು ತನಗೆ ಮದುವೆ ಖರ್ಚು ನೀಡಬೇಕು ಎಂದು ಕೋರಿ 2016ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯಲ್ಲಿ ತಮ್ಮ ತಂದೆ ಭಾನುರಾಮ್ ಅವರು ನಿವೃತ್ತಿಯಾಗುವ ವೇಳೆ ₹55 ಲಕ್ಷ ಪಡೆಯಲಿದ್ದಾರೆ. ಇದರಲ್ಲಿ ತನ್ನ ಮದುವೆ ಖರ್ಚಿಗಾಗಿ ₹20 ಲಕ್ಷ ನೀಡಬೇಕು ಎಂದು ಸೂಚಿಸಬೇಕು ಎಂದು ರಾಜೇಶ್ವರಿ ಅವರು ಉಲ್ಲೇಖಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು.ಆದರೆ, ಇದರ ವಿರುದ್ಧ ರಾಜೇಶ್ವರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT