ಪ್ರಾಗ್:ಸ್ಲೋವಾಕಿಯಾದಲ್ಲಿ ಬುಧವಾರ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಲಾಕ್ಡೌನ್ ಹೇರಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

55 ಲಕ್ಷ ಜನಸಂಖ್ಯೆಯುಳ್ಳ ಸ್ಲೋವಾಕಿಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಶೇಕಡವಾರು ಸೋಂಕಿನ ಪ್ರಮಾಣವಿದೆ ಎಂದು ಅಂಕಿಅಂಶಗಳು ಹೇಳಿವೆ.

ಈ ವಾರ ಆಸ್ಟ್ರಿಯಾವು ಕೋವಿಡ್ ಪ್ರಸರಣವನ್ನು ತಡೆಯಲು 10 ದಿನಗಳ ಲಾಕ್ಡೌನ್ ಅನ್ನು ಘೋಷಿಸಿತ್ತು. ಇದೀಗ ಸ್ಲೋವಾಕಿಯಾವು ಇದೇ ಮಾರ್ಗವನ್ನು ಅನುಸರಿಸಲು ಮುಂದಾಗಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವಸ್ಲೋವಾಕಿಯಾದ ರಕ್ಷಣಾ ಸಚಿವ ಜರೊಸ್ಲಾವ ನಾಡ್ ಅವರು, ನಾವು ಜವಾಬ್ದಾರರಾಗಬೇಕಿದ್ದರೆ, ಇದುವೇ (ಲಾಕ್ಡೌನ್) ನಮ್ಮ ಬಳಿಯಿರುವ ಏಕಮಾತ್ರ ಆಯ್ಕೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗ ಕಾಣುತ್ತಿಲ್ಲ’ ಎಂದು ಹೇಳಿದ್ದಾರೆ.

ಸರ್ಕಾರವು ಎರಡು ವಾರಗಳ ಲಾಕ್ಡೌನ್ ಹೇರಲು ಚಿಂತನೆ ನಡೆಸಿದೆ ಎಂಬುದಾಗಿ ಈ ಹಿಂದೆ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.