ಮಂಗಳವಾರ, ಜನವರಿ 19, 2021
17 °C

ಪೆನಿಸಿಲ್ವೇನಿಯಾ ಫಲಿತಾಂಶ ಪ್ರಶ್ನಿಸಿದ್ದ ಟ್ರಂಪ್ ಅರ್ಜಿ ವಜಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಪೆನ್ಸಿಲ್ವೇನಿಯಾದಲ್ಲಿನ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ತಂಡವು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಫೆಡರಲ್‌ ಮೇಲ್ಮನವಿ ನ್ಯಾಯಾಲಯ ವಜಾಮಾಡಿದೆ.

ಈ ಕ್ರಮದಿಂದ ಟ್ರಂಪ್ ಅವರಿಗೆ ಹಿನ್ನಡೆ ಆದಂತಾಗಿದೆ. ‘ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿರುವುದು ಮತದಾರರು, ವಕೀಲರಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ 3ನೇ ಸರ್ಕ್ಯೂಟ್ ಕೋರ್ಟ್‌ನ ಮೂವರು ಸದಸ್ಯರ ಪೀಠವು, ಟ್ರಂಪ್ ಪರ ಪ್ರಚಾರ ತಂಡವು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ಹಿಂದಿನ ಆದೇಶವನ್ನು ಎತ್ತಿಹಿಡಿಯಿತು.

ಮುಕ್ತ, ನ್ಯಾಯಸಮ್ಮತ ಚುನಾವಣೆ ದೇಶದ ಪ್ರಜಾಪ್ರಭುತ್ವದಲ್ಲಿ ಅಂತರ್ಗತವಾಗಿದೆ‌ ಎಂದು ನ್ಯಾಯಮೂರ್ತಿ ಸ್ಟೀಫನ್ಸ್‌ ಬಿಬಾಸ್ ಹೇಳಿದರು. 

‘ನ್ಯಾಯಯುತವಲ್ಲ ಎಂಬ ಆರೋಪ ಗಂಭೀರವಾದುದು. ಆದರೆ, ಚುನಾವಣೆಯೇ ನ್ಯಾಯಯುತವಲ್ಲ ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಆರೋಪಗಳಿಗೆ ಪೂರಕವಾಗಿ ಸ್ಪಷ್ಟ ಸಮರ್ಥನೆಗಳೂ ಅಗತ್ಯ. ಅಂಥ ಯಾವುದೂ ನಮ್ಮ ಮುಂದಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು. ಟ್ರಂಪ್‌ ಆಡಳಿತಾವಧಿಯಲ್ಲಿಯೇ ಈ ನ್ಯಾಯಮೂರ್ತಿಯ ನೇಮಕವಾಗಿತ್ತು.

ಚೀಫ್‌ ಸರ್ಕ್ಯೂಟ್‌ ನ್ಯಾಯಮೂರ್ತಿ ಬ್ರೂಕ್ಸ್‌ ಸ್ಮಿತ್ ಮತ್ತು ನ್ಯಾಯಮೂರ್ತಿ ಮೈಕೇಲ್ ಚಾಗರಸ್ ಅವರು ಪೀಠದ ಇತರ ಇಬ್ಬರು ಸದಸ್ಯರು. ಈ ಇಬ್ಬರು ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವಧಿಯಲ್ಲಿ ನೇಮಕವಾಗಿದ್ದರು.

ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ಒಪ್ಪಲು ಡೊನಾಲ್ಡ್ ಟ್ರಂಪ್ ಅವರು ನಿರಾಕರಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿನ ಫಲಿತಾಂಶವನ್ನು ಪ್ರಶ್ನಿಸಿ ಅವರ ಪರ ಪ್ರಚಾರ ತಂಡ ನ್ಯಾಯಾಲಯದ ಮೆಟ್ಟಿಲು ಏರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು