ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಚುನಾವಣೆ ಫಲಿತಾಂಶ: ನಮ್ಮ ಗೆಲುವಿನ ದಾರಿ ಸ್ಪಷ್ಟವಾಗಿದೆ ಎಂದ ಜೊ ಬೈಡನ್

Last Updated 7 ನವೆಂಬರ್ 2020, 6:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಚುನಾವಣೆಯ ಅಂತಿಮ ಫಲಿತಾಂಶ ಇನ್ನೂ ದೊರೆತಿಲ್ಲ. ಆದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಮ್ಮ ಪಕ್ಷದ ಗೆಲುವಿನ ದಾರಿ ಸ್ಪಷ್ಟವಾಗಿದೆ. ಅದು ನಮಗೂ ಮನವರಿಕೆಯಾಗಿದೆ‘ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್ ಹೇಳಿದ್ದಾರೆ.

‘ಚುನಾವಣೆಯ ಫಲಿತಾಂಶ ಇನ್ನೂ ಬರಬೇಕಿದೆ. ಆದರೆ, ಅಂಕಿ–ಸಂಖ್ಯೆಗಳು ನಮ್ಮ ಪಕ್ಷದ ಗೆಲುವನ್ನು ಸ್ಪಷ್ಟಪಡಿಸುತ್ತಿವೆ. ನಾವು ಈ ಸ್ಪರ್ಧೆಯ ಗೆಲುವಿನ ಹಾದಿಯಲ್ಲಿದ್ದೇವೆ‘ ಎಂದು ಬೈಡನ್ ಸ್ಪಷ್ಟಪಡಿಸಿದ್ದಾರೆ. ಅವರು ಗೆಲ್ಲಲು ಬೇಕಾದ ಮ್ಯಾಜಿಕ್ ಸಂಖ್ಯೆ 270ಕ್ಕೆ ಹತ್ತಿರವಾಗಿದ್ದಾರೆ.

‘ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಏನೆಲ್ಲ ಬೆಳವಣಿಗೆಗಳಾಗಿವೆ ನೋಡಿ’ ಎಂದು ಮತ ಎಣಿಕೆ ನಡೆಯುತ್ತಿರುವ ಪ್ರಮುಖ ಐದು ರಾಜ್ಯಗಳ ಪೈಕಿ, ನಾಲ್ಕರಲ್ಲಿ ತಮ್ಮ ಪಕ್ಷ ಮುನ್ನಡೆ ಸಾಧಿಸಿರುವುದನ್ನು ಉಲ್ಲೇಖಿಸಿ ಬೈಡನ್ ಮಾತನಾಡಿದರು.

ಸದ್ಯ ಬೈಡನ್ 264 ಹಾಗೂ ಪ್ರತಿಸ್ಪರ್ಧಿ ಟ್ರಂಪ್ 213 ಸದಸ್ಯರ ಬೆಂಬಲ ಪಡೆದಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಐದು ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಮುಂದುವರಿದಿದೆ. ಅರಿಜೋನಾದಲ್ಲಿ ಬೈಡನ್ ಅವರು ಟ್ರಂಪ್ ಅವರನ್ನು 38,455 ಮತಗಳಿಂದ ಹಿಂದಿಕ್ಕಿದ್ದಾರೆ. ಜಾರ್ಜಿಯಾ (4,224), ನೆವಡಾ (22,657) ಮತ್ತು ಪೆನ್ಸಿಲ್ವೇನಿಯದಲ್ಲೂ (19,500) ಮುನ್ನಡೆ ಸಾಧಿಸಿದ್ದಾರೆ. ಆದರೆ ಉತ್ತರ ಕೊರೊಲಿನಾದಲ್ಲಿ ಟ್ರಂಪ್ 76,587 ಮತಗಳಿಂದ ಮುಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT