ಶನಿವಾರ, ನವೆಂಬರ್ 28, 2020
22 °C

ಡೆಮಾಕ್ರಟ್‌ಗಳು ಚುನಾವಣೆಯನ್ನೇ ಕಳವು ಮಾಡುತ್ತಿದ್ದಾರೆ: ಡೊನಾಲ್ಡ್ ಟ್ರಂಪ್ ಆರೋಪ

ಎಎನ್‌ಐ‌ Updated:

ಅಕ್ಷರ ಗಾತ್ರ : | |

Donald trump

ವಾಷಿಂಗ್ಟನ್: ‘ನ್ಯಾಯಯುತವಾದ ಮತಗಳ ಎಣಿಕೆ ನಡೆದರೆ ನಾನು ಗೆದ್ದೇ ಗೆಲ್ಲಬೇಕು. ಡೆಮಾಕ್ರಟ್‌ಗಳು ಚುನಾವಣೆಯನ್ನೇ ಕಳವು ಮಾಡುತ್ತಿದ್ದಾರೆ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಯುತವಾದ ಮತಗಳನ್ನು ಲೆಕ್ಕಹಾಕಿದರೆ ನಾನು ಸುಲಭವಾಗಿ ಗೆಲ್ಲುತ್ತೇನೆ. ಅಕ್ರಮ ಮತಗಳನ್ನು ಲೆಕ್ಕಹಾಕಿದರೆ, ಅವರು ನಮ್ಮಿಂದಿ ಚುನಾವಣೆಯನ್ನು ಕಳವು ಮಾಡುತ್ತಾರೆ. ಅನೇಕ ನಿರ್ಣಾಯಕ ರಾಜ್ಯಗಳಲ್ಲಿ ನಾನು ಗೆಲುವು ಸಾಧಿಸಿ ಆಗಿದೆ. ಫ್ಲೊರಿಡಾ, ಲೊವಾ, ಇಂಡಿಯಾನ, ಒಹಿಯೊ ಸೇರಿ ಪ್ರಮುಖ ರಾಜ್ಯಗಳಲ್ಲಿ ಭರ್ಜರಿ ಜಯ ಗಳಿಸಿದ್ದೇನೆ. ಅನೇಕ ಅಡೆತಡೆಗಳ ಹೊರತಾಗಿಯೂ ನಾವು ಐತಿಹಾಸಿಕ ಜಯ ಗಳಿಸಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 

‘ಸಮೀಕ್ಷಗಳು ಈ ಹಿಂದೆ ಹೇಳಿದಂತೆ ದೇಶದಲ್ಲಿ ಡೆಮಾಕ್ರಟ್‌ ಪರ ಅಲೆ ಇಲ್ಲ. ರಿಪಬ್ಲಿಕನ್ ಪಕ್ಷದ ಪರ ಅಲೆ ಇದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಡೆಮಾಕ್ರಟಿಕ್ ಪಕ್ಷವು ದೊಡ್ಡ ದಾನಿಗಳ, ತಂತ್ರಜ್ಞಾನೋದ್ಯಮಿಗಳ, ಸಿರಿವಂತರಿಗೆ ಸೇರಿದ್ದಾಗಿದೆ. ಆದರೆ ರಿಪಬ್ಲಿಕನ್ ಅಮೆರಿಕದ ಕಾರ್ಮಿಕರ ಪಕ್ಷವಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: 

ಈ ಮಧ್ಯೆ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಯಾವುದೇ ಅನುಮಾನಗಳಿಲ್ಲ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಹೇಳಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಶೀಘ್ರ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು