ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಬಿ ವೀಸಾ ರದ್ಧತಿ ಆದೇಶಕ್ಕೆ ಕೋರ್ಟ್‌ ತಡೆ

Last Updated 2 ಅಕ್ಟೋಬರ್ 2020, 7:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಎಚ್‌1ಬಿ ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೂನ್ ತಿಂಗಳಲ್ಲಿ ಹೊರಡಿಸಿದ್ದ ಆದೇಶ ಜಾರಿಗೆ ಫೆಡರಲ್ ನ್ಯಾಯಾಧೀಶರು ತಡೆ ಹಿಡಿದಿದ್ದಾರೆ.

ಗುರುವಾರ ಈ ಆದೇಶವನ್ನು ಹೊರಡಿಸಿರುವಉತ್ತರ ಕ್ಯಾಲಿಫೋರ್ನಿಯಾ ಜಿಲ್ಲೆಯ ನ್ಯಾಯಾಧೀಶ‌ ಜೆಫೆರಿ ವೈಟ್,‌ ‘ಅಧ್ಯಕ್ಷರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಮೀರಿ ಈ ಆದೇಶ ನೀಡಿದ್ದಾರೆ‘ ಎಂದುಅಭಿಪ್ರಾಯಪಟ್ಟಿದ್ದಾರೆ.

ವೀಸಾ ರದ್ಧತಿಗೆ ಸಂಬಂಧಿಸಿದಂತೆ ವಾಣಿಜ್ಯ ಇಲಾಖೆ ಮತ್ತುಹೋಮ್‌ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಿರುದ್ಧ ನ್ಯಾಷನಲ್ ಅಸೋಸಿಯೇಷನ್ ಆಫ್ ಮ್ಯಾನುಫ್ಯಾಕ್ಚರರ್ಸ್, ಅಮೆರಿಕದ ವಾಣಿಜ್ಯ ಮಂಡಳಿ, ನ್ಯಾಷನಲ್ ರಿಟೇಲ್ ಫೆಡರೇಶನ್ ಮತ್ತು ಟೆಕ್ ನೆಟ್ ಪ್ರತಿನಿಧಿಸುವ ಕಂಪನಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದವು.

ಈ ವೀಸಾ ರದ್ದತಿಯಿಂದಾಗಿ ಉದ್ಯೋಗಿಗಳ ನೇಮಕಕ್ಕೆ ತಡೆ ನೀಡಿದಂತಾಗುತ್ತದೆ. ಇದರಿಂದ ದೇಶದಲ್ಲಿ ಆರ್ಥಿಕ ಚೇತರಿಕೆ, ಬೆಳವಣಿಗೆಗೆ ತೊಂದರೆಯಾಗುತ್ತದೆ ಎಂದು ವಾದ ಮಂಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT