ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ನೆರವು: ಬೈಡನ್ ಆಡಳಿತದ ಕ್ರಮಕ್ಕೆ ಜನಪ್ರತಿನಿಧಿಗಳ ಶ್ಲಾಘನೆ

ಭಾರತಕ್ಕೆ ನೀಡುತ್ತಿರುವ ಲಸಿಕೆ, ವೈದ್ಯಕೀಯ ಪರಿಕರಗಳ ನೆರವು ಹೆಚ್ಚಿಸಲು ಮನವಿ
Last Updated 5 ಜೂನ್ 2021, 6:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಸೇರಿದಂತೆ ಇತರೆ ರಾಷ್ಟ್ರಗಳಿಗೆ 2.5 ಕೋಟಿ ಡೋಸ್‌ಗಳಷ್ಟು ಕೋವಿಡ್‌ ಲಸಿಕೆ ವಿತರಿಸುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ನಿರ್ಧಾರವನ್ನು ಅಮೆರಿಕದ ಹಿರಿಯ ಸಂಸದರು ಶ್ಲಾಘಿಸಿದ್ದಾರೆ.

‘ಕೋವಿಡ್‌ 19’ ಲಸಿಕೆಗಳನ್ನು ಅಗತ್ಯವಿರುವ ರಾಷ್ಟ್ರಗಳಿಗೆ ಪೂರೈಸುವ ಬೈಡನ್ ಆಡಳಿತದ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ‘ ಎಂದು ಸೆನೆಟ್ ಇಂಡಿಯಾ ಕಾಕಸ್‌ನ ಉಪಾಧ್ಯಕ್ಷ ಸೆನೆಟರ್ ಜಾನ್ ಕಾರ್ನಿನ್‌ ಹೇಳಿದ್ದಾರೆ.

‘ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪಾಯಕಾರಿ ಮಟ್ಟ ತಲುಪಿದೆ. ಇಂಥ ಸಮಯದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಲಸಿಕೆಗಳನ್ನು ಪೂರೈಸುವುದು ಉತ್ತಮ ನಿರ್ಧಾರ‘ ಎಂದು ಕಾರ್ನಿನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಾರತ ಸೇರಿದಂತೆ ಕೋವಿಡ್‌–19ರ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿರುವ ತಮ್ಮ ಮಿತ್ರ ರಾಷ್ಟ್ರಗಳಿಗೆ ಅಮರಿಕ ಸರ್ಕಾರ ಹೆಚ್ಚುವರಿ ಲಸಿಕೆಗಳ ಪೂರೈಕೆಯನ್ನು ಮುಂದುವರಿಸುವುದು ಬಹಳ ಪ್ರಮುಖವಾದ ಕಾರ್ಯ ಎಂದು ಸೆನೆಟರ್ ಸಿಂಡಿ ಹೈಡ್‌–ಸ್ಮಿತ್‌ ಟ್ವೀಟ್‌ ಮಾಡಿದ್ದಾರೆ.

‘ಈ ಸಾಂಕ್ರಾಮಿಕ ರೋಗದಿಂದ ನಲುಗುತ್ತಿರುವ ದೇಶಗಳು ಸಾಮಾನ್ಯ ಸ್ಥಿತಿಗೆ ಮರಳಲು ಆ ದೇಶಗಳಿಗೆ ಜಾಗತಿಕವಾಗಿ ಸಹಕಾರ ಅಗತ್ಯವಿದೆ‘ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಇತರ ದೇಶಗಳಿಗೆ ಲಸಿಕೆಗಳನ್ನು ಪೂರೈಸುವ ಬೈಡನ್ ಆಡಳಿತದ ಕ್ರಮವನ್ನು ಬೆಂಬಲಿಸುವುದಾಗಿ ಸಂಸದ ಡ್ವೈಟ್ ಇವಾನ್ಸ್ ಹೇಳಿದ್ದಾರೆ.‌

ಭಾರತದಲ್ಲಿ ಕೋವಿಡ್‌ ಸೃಷ್ಟಿಸಿರುವ ಅವಾಂತರ ಕುರಿತು ಇತ್ತೀಚೆಗೆ ಹ್ಯೂಸ್ಟನ್‌ನಲ್ಲಿ ಭಾರತೀಯ–ಅಮೆರಿಕನ್ ಸಮುದಾಯದವರು ಆಯೋಜಿಸಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂಸದೆ ಶೈಲಾ ಜಾಕ್ಸನ್‌ ಲೀ, ಬೈಡನ್ ಆಡಳಿತದ ಕ್ರಮವನ್ನು ಶ್ಲಾಘಿಸಿದ್ದರು. ಇದೇ ವೇಳೆ ಬೈಡನ್ ಅವರು ಭಾರತಕ್ಕೆ ನೀಡುತ್ತಿರುವ ಲಸಿಕೆಗಳು ಮತ್ತು ವೈದ್ಯಕೀಯ ಪರಿಕರಗಳ ನೆರವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT