ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಶೋಗ್ಗಿ ಹತ್ಯೆ ಪ್ರಕರಣ: ಸೌದಿ ರಾಜಕುಮಾರನಿಗೆ ಬೈಡನ್‌ ಶ್ರೀರಕ್ಷೆ?

Last Updated 18 ನವೆಂಬರ್ 2022, 21:25 IST
ಅಕ್ಷರ ಗಾತ್ರ

ವಾಷಿಂಗ್ಟನ್:‘ವಾಷಿಂಗ್ಟನ್ ಪೋಸ್ಟ್’ ಅಂಕಣಕಾರ, ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯಲ್ಲಿ ಪಾತ್ರವಿರುವ ಆರೋಪ ಹೊತ್ತಿರುವಸೌದಿ ಅರೇಬಿಯಾದ ರಾಜಕುಮಾರನಿಗೆ ಕಾನೂನು ಕ್ರಮದಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ ಪರಿಶೀಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತ ಹೇಳಿದೆ.

ಖಶೋಗ್ಗಿ ಅವರ ಹತ್ಯೆಯಲ್ಲಿ ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಕೈವಾಡ ಇತ್ತು ಎಂಬುದಾಗಿ ಬೈಡನ್‌ ಈ ಹಿಂದೆ ದೂರಿದ್ದರು. ಆದರೆ, ಈಗ ಬೈಡನ್‌ ಅವರ ಆಡಳಿತದ ನಿಲುವು ಬದಲಾಗಿದೆ.

ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರಿಗೆ ಬಂಧನದಿಂದ ವಿನಾಯಿತಿ ಮತ್ತು ರಾಜತಾಂತ್ರಿಕ ರಕ್ಷಣೆ ನೀಡುವ ಬಗ್ಗೆ ಅಂತಿಮವಾಗಿ ನ್ಯಾಯಾಧೀಶರು ನಿರ್ಧರಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ. ಆದರೆ, ಬೈಡನ್‌ ಆಡಳಿತದ ಈ ನಡೆದ, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಮೆರಿಕದ ಹಲವು ಸಂಸದರ ಕೋಪಕ್ಕೆ ಗುರಿಯಾಗುವ ಸಾಧ್ಯತೆಯೂ ಇದೆ.

ಖಶೋಗ್ಗಿ ಅವರ ಗೆಳತಿ ಹಾಗೂ ಖಶೋಗ್ಗಿ ಅವರು ಸ್ಥಾಪಿಸಿದ್ದ ‘ಡೆಮಾಕ್ರಸಿ ಫಾರ್‌ ದಿ ಅರಬ್‌ ವರ್ಲ್ಡ್ ನೌ’ ಎಂಬ ಗುಂಪುವತಿಯಿಂದ ಮೊಹಮ್ಮದ್‌ ಬಿನ್‌ ಸಲ್ಮಾನ್‌ ವಿರುದ್ಧ ಕೋರ್ಟ್ ಕಾನೂನು ಸಮರ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT