ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಬೈಡನ್‌, ಕಮಲಾ ಹ್ಯಾರಿಸ್‌ಗೆ ‘ವರ್ಷದ ವ್ಯಕ್ತಿ‘ ಗೌರವ

ಟೈಮ್‌ ನಿಯತಕಾಲಿಕೆಯಿಂದ ಆಯ್ಕೆ
Last Updated 11 ಡಿಸೆಂಬರ್ 2020, 6:54 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಹಾಗೂಐ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಟೈಮ್‌ ನಿಯತಕಾಲಿಕೆ ನೀಡುವ ‘2020ರ ವರ್ಷದ ವ್ಯಕ್ತಿ’ ಗೌರವಕ್ಕೆ ಪಾತ್ರರಾಗಿದ್ದಾರೆ.

‘ಜನರ ಮನಸನ್ನು ಒಡೆಯುವ ವಿಭಜಕ ಶಕ್ತಿಗಳಿಗಿಂತ ಸಹಾನುಭೂತಿವುಳ್ಳ ಶಕ್ತಿಗಳೇ ಮೇಲು ಎಂದು ತೋರಿಸಿಕೊಟ್ಟಿರುವ ಈ ನಾಯಕರು, ಜಗದ ನೋವನ್ನು ಶಮನ ಮಾಡುವ ಭರವಸೆ ಮೂಡಿಸಿದ್ದಾರೆ’ ಎಂದು ನಿಯತಕಾಲಿಕೆ ಹೇಳಿದೆ.

‘ಕಳೆದ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ ಡೊನಾಲ್ಡ್‌ ಟ್ರಂಪ್‌ ವಿಭಜಕ ಶಕ್ತಿ ಎನಿಸಿದ್ದರು. ಈಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ ಅವರು ದೇಶದ ಜನರು ಏನನ್ನು ಬಯಸಿದ್ದರು ಎಂಬುದನ್ನು ತೋರಿಸಿದ್ದಾರೆ’ ಎಂದೂ ಟೈಮ್‌ ನಿಯತಕಾಲಿಕೆ ಬಣ್ಣಿಸಿದೆ.

ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಲರ್ಜಿ ಆ್ಯಂಡ್‌ ಇನ್‌ಫೆಕ್ಸಿಯಸ್‌ ಡಿಸೀಸ್‌ನ ನಿರ್ದೇಶಕ ಡಾ.ಅಂಥೋನಿ ಫೌಸಿ, ಆರೋಗ್ಯ ಕಾರ್ಯಕರ್ತರು, ಮೂವ್‌ಮೆಂಟ್‌ ಫಾರ್‌ ರೇಸಿಯಸ್‌ ಜಸ್ಟಿಸ್‌ ಸಂಘಟನೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರುಗಳು ಅಂತಿಮ ಸುತ್ತಿನಲ್ಲಿದ್ದವು.

ಆದರೆ, ಡಾ.ಫೌಸಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ‘2020 ಗಾರ್ಡಿಯನ್ಸ್‌ ಆಫ್‌ ದಿ ಇಯರ್‌’ ಎಂದು ಗುರುತಿಸಲಾಗಿದೆ. ವಿಚಾರಸಂಕಿರಣ, ಸಮಾವೇಶಕ್ಕೆ ಆನ್‌ಲೈನ್‌ ವೇದಿಕೆ ಒದಗಿಸುವ ಝೂಮ್‌ ಆ್ಯಪ್‌ನ ಸಿಇಒ ಎರಿಕ್‌ ಯುವಾನ್‌ ಅವರು ‘ವರ್ಷದ ಉದ್ಯಮಿ’ ಗೌರವಕ್ಕೆ ಪಾತ್ರರಾಗಿದ್ದಾರೆ.

ದಕ್ಷಿಣ ಕೊರಿಯಾದ ವಾದ್ಯಗೋಷ್ಠಿ ತಂಡ ‘ಬಿಟಿಎಸ್‌’– ವರ್ಷದ ಮನರಂಜನಾ ಸಂಸ್ಥೆ, ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ಆಟಗಾರ ಲಿ ಬ್ರಾನ್‌ ಜೇಮ್ಸ್‌ ಅವರನ್ನು ವರ್ಷದ ಅಥ್ಲೀಟ್‌ ಎಂದು ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT