ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥಾಮಸ್‌–ಗ್ರೀನ್‌ಫೀಲ್ಡ್‌

ಅಧ್ಯಕ್ಷ ಜೋಬೈಡನ್ ನಾಮನಿರ್ದೇಶನವನ್ನು ದೃಢಪಡಿಸಿದ ಅಮೆರಿಕದ ಸೆನೆಟ್
Last Updated 24 ಫೆಬ್ರುವರಿ 2021, 7:34 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅನುಭವಿ ರಾಜತಾಂತ್ರಿಕ ಅಧಿಕಾರಿ ಲಿಂಡಾ ಥಾಮಸ್‌–ಗ್ರೀನ್‌ಫೀಲ್ಡ್‌ ಅವರನ್ನು ವಿಶ್ವಸಂಸ್ಥೆಯ ಮುಂದಿನ ಅಮೆರಿಕದ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್ ಅವರು ನಾಮನಿರ್ದೇಶಿಸಿದ್ದು, ಅದನ್ನು ಅಮೆರಿಕದ ಸೆನೆಟ್‌ ದೃಢಪಡಿಸಿದೆ.

ನೂರು ಸದಸ್ಯರ ಸೆನೆಟ್ ಮಂಗಳವಾರ ಥಾಮಸ್-ಗ್ರೀನ್‌ಫೀಲ್ಡ್ ಅವರನ್ನು 78 ರಿಂದ 20 ಮತಗಳಿಂದ ಬೆಂಬಲಿಸಿ ವಿಶ್ವ ಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಮತ್ತು ಬೈಡನ್ ಅವರ ಸಂಪುಟ ಸದಸ್ಯರಾಗಿ ಆಯ್ಕೆ ಮಾಡಿತು.

ಥಾಮಸ್ ಗ್ರೀನ್‌ಫೀಲ್ಡ್‌, ಕಳೆದ 35 ವರ್ಷಗಳಿಂದ ನಾಲ್ಕು ಖಂಡಗಳೊಂದಿಗೆ ವಿದೇಶಾಂಗ ಸೇವೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವುಗಳಲ್ಲಿ ಆಫ್ರಿಕಾ ಖಂಡದಲ್ಲಿ ಸಲ್ಲಿಸಿರುವ ಸೇವೆ ಉಲ್ಲೇಖಾರ್ಹ.

‘ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್‌ ಅವರನ್ನುವಿಶ್ವಸಂಸ್ಥೆಯಲ್ಲಿ ಅಮೆರಿಕದ ಕಾಯಂ ಪ್ರತಿನಿಧಿಯಾಗಿ ನೇಮಿಸುವುದನ್ನು ಸೆನೆಟ್ ದೃಢಪಡಿಸಿರುವುದು, ಜಾಗತಿಕ ಮಟ್ಟದಲ್ಲಿ ಅಮೆರಿಕದ ನಾಯಕತ್ವವನ್ನು ಪುನರ್ ಸ್ಥಾಪಿಸುವ ಅಧ್ಯಕ್ಷ ಬೈಡನ್ ಅವರು ಬದ್ಧತೆಯನ್ನು‌ ಬಲಪಡಿಸುತ್ತದೆ‘ ಎಂದು ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಹೇಳಿದ್ದಾರೆ.‌

‘ಥಾಮಸ್‌ – ಗ್ರೀನ್‌ಫೀಲ್ಡ್‌ ಒಬ್ಬ ಅನುಭವಿ ರಾಜತಾಂತ್ರಿಕ ಅಧಿಕಾರಿ. ಅಮೆರಿಕನ್ ಮೌಲ್ಯಗಳ ಬಗ್ಗೆ ಬಹಳ ಬದ್ಧತೆ ಹೊಂದಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ನಮ್ಮ ರಾಷ್ಟ್ರವನ್ನು ಸಮರ್ಪಕವಾಗಿ ಪ್ರತಿನಿಧಿಸಲು ಇವರು ಒಬ್ಬ ಸೂಕ್ತ ವ್ಯಕ್ತಿ‘ ಎಂದು ಬ್ಲಿಂಕನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT