ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ಜಯಕ್ಕೆ ಪಾಕ್‌ನಲ್ಲಿ ಸಂಭ್ರಮ, ಭಾರತಕ್ಕಿದು ಉತ್ತಮ ಸಂದೇಶವಲ್ಲ: ಅಮೆರಿಕ

Last Updated 15 ಸೆಪ್ಟೆಂಬರ್ 2021, 3:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಾದ ಬೆಳವಣಿಗೆ ಮತ್ತು ಅದಕ್ಕಿರುವ ಇಸ್ಲಮಾಬಾದ್‌ನ ಪಾತ್ರ ಭಾರತಕ್ಕೆ ಉತ್ತಮ ಸಂದೇಶವಲ್ಲ ಎಂದು ರಿಪಬ್ಲಿಕನ್‌ ಸೆನೆಟರ್‌ ಮಾರ್ಕೊ ರುಬಿಯೊ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಾದ ಬೆಳವಣಿಗೆಗೆ ಸಂಬಂಧಿಸಿದ ಸಭೆಯಲ್ಲಿ, ಅಫ್ಗಾನಿಸ್ತಾನ ಯುದ್ಧದಲ್ಲಿ ತಾಲಿಬಾನ್‌ ಮೇಲುಗೈ ಸಾಧಿಸಿದ್ದನ್ನು ಪಾಕಿಸ್ತಾನ ಸರ್ಕಾರದಲ್ಲಿರುವ ಭಾರತ ವಿರುದ್ಧ ಸದಾ ದ್ವೇಷಕಾರುವವರು ಸಂಭ್ರಮಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ರುಬಿಯೊ ತಿಳಿಸಿದ್ದಾರೆ.

ತಾಲಿಬಾನ್‌ ಸಂಘಟನೆಗೆ ಪಾಕಿಸ್ತಾನ ಸಹಾಯ ಮಾಡುತ್ತಿರುವುದನ್ನು ಅಮೆರಿಕದ ಆಡಳಿತ ವರ್ಗದಲ್ಲಿರುವ ಹಲವು ಮಂದಿ ಕಡೆಗಣಿಸಿದ್ದರು. ಕೆಲವರು ಇಸ್ಲಾಮಾಬಾದ್‌ನ ವಂಚನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಪಾಕಿಸ್ತಾನವು ತಾಲಿಬಾನ್‌ ಸರ್ಕಾರವನ್ನು ಭಾರತದ ವಿರುದ್ಧವಿರುವ ತನ್ನ ಜೊತೆಗಾರನೆಂದು ತಿಳಿದುಕೊಂಡಿದೆ ಎಂದು ರುಬಿಯೊ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT