ಶುಕ್ರವಾರ, ಜೂನ್ 25, 2021
30 °C

‘ಕೋವಿಡ್‌: ಭಾರತಕ್ಕೆ ಇನ್ನಷ್ಟು ನೆರವು ನೀಡಲು ಅಮೆರಿಕದ ಬದ್ಧ –ನೆಡ್ ಪ್ರೈಸ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತದಲ್ಲಿ ವ್ಯಾಪಿಸಿರುವ ಕೋವಿಡ್‌ ಪಿಡುಗನ್ನು ನಿಭಾಯಿಸುವುದಕ್ಕಾಗಿ ಅಮೆರಿಕವು ನೆರವನ್ನು ಮುಂದುವರಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್‌ ಹೇಳಿದ್ದಾರೆ.

‘ಭಾರತಕ್ಕೆ ಅಮೆರಿಕ ಸರ್ಕಾರ 100 ದಶಲಕ್ಷ ಡಾಲರ್‌ ಮೊತ್ತದ ನೆರವು ನೀಡಿದೆ. ಅಮೆರಿಕದ ಖಾಸಗಿ ವಲಯಗಳಿಂದ 400 ದಶಲಕ್ಷ ಡಾಲರ್‌ಗಳಷ್ಟು ನೆರವು ನೀಡಲಾಗಿದೆ. ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ಯಾವ ರೀತಿಯ ನೆರವು ನೀಡಬಹುದು ಎಂಬ ವಿಚಾರದಲ್ಲಿ  ಭಾರತದ ಅಧಿಕಾರಿಗಳು ಮತ್ತು ಆರೋಗ್ಯ ಪರಿಣಿತರರೊಂದಿಗೆ ನಿಕಟ ಸಂಪರ್ಕ ಸಾಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

7‌‌8 ಸಾವಿರ ಡೋಸ್‌ ರೆಮ್‌ಡಸಿವಿರ್‌ ರವಾನೆ: ‘ಅಮೆರಿಕ ಗಿಲಾಡ್ ಸೈನ್ಸಸ್‌ ಸಂಸ್ಥೆಯಿಂದ 78 ಸಾವಿರ ಡೋಸ್‌ ರೆಮ್‌ಡೆಸಿವಿರ್‌ನ ಹೊತ್ತ ನಾಲ್ಕನೇ ಹಂತದ ಸರಕು ಭಾರತ ತಲುಪಿದೆ. ಹೀಗಾಗಿ ಇದುವರೆಗೆ 2.61 ಲಕ್ಷ ಡೋಸ್‌ ಭಾರತಕ್ಕೆ ಬಂದಂತಾಗಿದೆ. ಇನ್ನೂ 1.25 ಲಕ್ಷ ಡೋಸ್ ಕಳುಹಿಸಿಕೊಡಲು ಅಮೆರಿಕದ ಒಪ್ಪಿದೆ’ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು