ಗುರುವಾರ , ಸೆಪ್ಟೆಂಬರ್ 23, 2021
21 °C

ಅಮೆರಿಕ: ಅಫ್ಗಾನ್ ವಲಸಿಗರಿಗಾಗಿ ಮಿಲಿಟರಿ ನೆಲೆಗಳಲ್ಲಿ 'ಸಣ್ಣ ನಗರ'ಗಳ ನಿರ್ಮಾಣ

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕಕ್ಕೆ ವಲಸೆ ಬರುತ್ತಿರುವ ಅಫ್ಗನ್ನರ ಸಂಖ್ಯೆ ಹೆಚ್ಚಾದಂತೆ, ವಲಸಿಗರಿಗೆ ನೈರ್ಮಲ್ಯ, ಆಹಾರ ಪೂರೈಕೆಯಂತಹ ಸವಾಲುಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ, ವಲಸಿಗರಿಗಾಗಿ ತನ್ನ ಸೇನಾ ನೆಲೆಗಳಲ್ಲಿ ಸಣ್ಣ ಸಣ್ಣ ನಗರಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.

ವಾಯುಪಡೆಯ ನಾರ್ದರ್ನ್ ಕಮಾಂಡ್‌ ಮುಖ್ಯಸ್ಥ, ಜನರಲ್‌ ಗ್ಲೆನ್‌ ವ್ಯಾನ್‌ಹೆರ್ಕ್‌, ‘ಶುಕ್ರವಾರದವರೆಗೆ ಅಮೆರಿಕದ ಏಳು ಸೇನಾ ನೆಲೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಅಫ್ಗಾನ್‌ ವಲಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದ್ದಾರೆ.

‘ಭಾಷೆ, ಸಂಸ್ಕೃತಿ ಮತ್ತು ಇತರ ವಿಷಯಗಳ ಕಾರಣಕ್ಕಾಗಿ ವಲಸಿಗರಿಗೆ ನೆರವು ಒದಗಿಸುವ ಕಾರ್ಯಕ್ಕೆ ತೊಂದರೆಯಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

‘ಅಫ್ಗಾನಿಸ್ತಾನದ ವಲಸಿಗರಿಗೆ ಆಹಾರ, ವಸತಿ, ನೈರ್ಮಲ್ಯದಂತಹ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಎಂಟು ಸಣ್ಣ ನಗರಗಳನ್ನು ನಿರ್ಮಿಸಲಾಗುತ್ತಿದ್ದು, ಇದು ಸವಾಲಿನಿಂದ ಕೂಡಿದೆ’ ಎಂದರು.

‘ನಿರಾಶ್ರಿತರು ನೆಲೆಸಿರುವ ಸ್ಥಳದ ಉಸ್ತುವಾರಿಗಾಗಿ ಸೇನಾ ಅಧಿಕಾರಿಯೊಬ್ಬರನ್ನು ‘ಮೇಯರ್‌' ಆಗಿ ನಿಯೋಜಿಸಲಾಗಿದೆ. ಸಂವಹನ ಹಾಗೂ ಇತರ ಪರಿಹಾರ ಕಾರ್ಯಗಳಿಗೆ ಅಫ್ಗಾನ್‌ಮುಖಂಡರೊಬ್ಬರು ನಿಯೋಜಿತ ಮೇಯರ್‌ಗೆ ನೆರವಾಗುವರು’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು