ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಗೆದ್ದೇ ಗೆಲ್ಲುತ್ತೇವೆ, ಮತ್ತೆ ಮೇಲೇರುತ್ತೇವೆ: ಕಮಲಾ

Last Updated 21 ಜನವರಿ 2021, 6:02 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಮೆರಿಕ ಮತ್ತೆ ಮೇಲೆದ್ದು ನಿಲ್ಲಲಿದೆ. ಇದು ಈ ದೇಶದ ಜನರ ಆಕಾಂಕ್ಷೆ ಕೂಡ. ಅಧ್ಯಕ್ಷ ಜೋ ಬೈಡನ್ ಇವೆಲ್ಲವನ್ನೂ ಸಾಕಾರಗೊಳಿಸಲು ಜನರೊಂದಿಗೆ ಒಗ್ಗಟ್ಟಿನೊಂದಿಗೆ ಹೆಜ್ಜೆ ಹಾಕುತ್ತಾರೆ‘ ಎಂದು ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹೇಳಿದರು.

ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರು, ಮೊದಲ ಕಪ್ಪು ವರ್ಣದ ಮಹಿಳೆ ಹಾಗೂ ಮೊದಲ ಏಷ್ಯನ್‌–ಅಮೆರಿಕನ್ ಮಹಿಳೆಯಾಗಿ ಅಧಿಕಾರ ಸ್ವೀಕರಿಸಿದ ಕಮಲಾ ಹ್ಯಾರಿಸ್‌, ಲಿಂಕನ್‌ ಸ್ಮಾರಕ ಭವನದ ಹೊರಗೆ ಅಮೆರಿಕನ್ನರ ಆಕಾಂಕ್ಷೆಗಳ ಬಗ್ಗೆ ಮಾತನಾಡಿದರು.

‘ಈ ಕ್ಷಣವು , ಇಂಥ ಸಂಕಷ್ಟದ ಸನ್ನಿವೇಶದಲ್ಲೂ ನಾವು ಯಾರು ಎಂಬುದನ್ನು ತೋರಿಸುತ್ತಿದೆ. ನಾವು ಕನಸು ಕಾಣುವುದಷ್ಟೇ ಅಲ್ಲ, ಅದನ್ನು ಸಾಕಾರಗೊಳಿಸುತ್ತೇವೆ‘ ಎಂದರು

‘ನಾವು ಚಂದ್ರನ ಮೇಲೆ ಹಾರಿದ್ದೇವೆ. ಅಲ್ಲಿ ನಮ್ಮ ರಾಷ್ಟ್ರ ಧ್ವಜವನ್ನು ಹಾರಿಸಿದ್ದೇವೆ. ನಾವು ಧೈರ್ಯಶಾಲಿಗಳು, ನಿರ್ಭೀತ ಮತ್ತು ಮಹತ್ವಾಕಾಂಕ್ಷೆಯುಳ್ಳವರು. ನಾವು ಗೆಲ್ಲುತ್ತೇವೆ, ಪುನಃ ಮೇಲೇಳುತ್ತೇವೆ ಎಂಬ ನಂಬಿಕೆ ಇದೆ. ಇದು ಅಮೆರಿಕಾ ಜನರ ಆಕಾಂಕ್ಷೆ‘ ಎಂದು ಹ್ಯಾರಿಸ್ ಹೇಳಿದರು.

ತಮ್ಮ ಪ್ರತಿಕ್ರಿಯೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ‘ಸಿವಿಲ್‌ ವಾರ್‌‘ ವಿರುದ್ಧ ಹೋರಾಟವನ್ನು ಉಲ್ಲೇಖಿಸಿದರು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಜನಾಂಗೀಯ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೇಗೆ ಹೋರಾಡಿದರು ಎಂಬುದನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT