ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಗಾಗಿ ವರ್ಚುವಲ್‌ ಮಾತುಕತೆ ಪುನರಾರಂಭ

Last Updated 1 ಏಪ್ರಿಲ್ 2022, 16:02 IST
ಅಕ್ಷರ ಗಾತ್ರ

ಲುವಿವ್‌: ಸಂಘರ್ಷ ಶಮನಗೊಳಿಸಲು ರಷ್ಯಾ ಮತ್ತು ಉಕ್ರೇನ್‌ ನಿಯೋಗಗಳ ನಡುವೆ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಕೊನೆಯ ಸಭೆಯ ಮೂರು ದಿನಗಳ ನಂತರ ಶುಕ್ರವಾರ ಉಭಯ ರಾಷ್ಟ್ರಗಳ ನಡುವೆ ವರ್ಚುವಲ್‌ (ವಿಡಿಯೊ ಲಿಂಕ್) ಮೂಲಕ ಶಾಂತಿಮಾತುಕತೆಗಳು ಪುನರಾರಂಭಗೊಂಡಿವೆ.

ರಷ್ಯಾ ನಿಯೋಗದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್‌ಸ್ಕಿ ಮಾತುಕತೆಯಲ್ಲಿ ತೊಡಗಿರುವ ನಿಯೋಗಗಳ ಚಿತ್ರವನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

‘ಮಾತುಕತೆಗಳು ಪುನರಾರಂಭಗೊಂಡಿವೆ’ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿಯೂ ದೃಢಪಡಿಸಿದೆ.

‘ಕ್ರಿಮಿಯಾ ಮತ್ತು ಡಾನ್‌ಬಾಸ್‌ನಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದುಮೆಡಿನ್‌ಸ್ಕಿ ಮಾತುಕತೆ ವೇಳೆ ಸ್ಪಷ್ಟಪಡಿಸಿದರು.

ರಷ್ಯಾ 2014ರಲ್ಲಿ ದಕ್ಷಿಣ ಉಕ್ರೇನ್‌ನಲ್ಲಿನ ಕ್ರಿಮಿಯಾ ಪೆನಿನ್ಸುಲಾವನ್ನು ಸ್ವಾಧೀನಪಡಿಸಿಕೊಂಡಿತು. ರಷ್ಯನ್‌ ಭಾಷಿಗರು ಹೆಚ್ಚಿರುವಡಾನ್‌ಬಾಸ್‌ ಕೈಗಾರಿಕಾ ಪ್ರದೇಶವಾಗಿದ್ದು, ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು 2014ರಿಂದ ಡಾನ್‌ಬಾಸ್‌ನ ಸ್ವಾತಂತ್ರ್ಯಕ್ಕಾಗಿಉಕ್ರೇನ್‌ ಸೇನಾ ಪಡೆಗಳೊಂದಿಗೆ ಹೋರಾಟ ನಡೆಸುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT