ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಆಡಳಿತ ಅಂತ್ಯಗೊಳಿಸಿ: ಜೋ ಬೈಡನ್

ಮತದಾರರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಮನವಿ
Last Updated 1 ನವೆಂಬರ್ 2020, 7:30 IST
ಅಕ್ಷರ ಗಾತ್ರ

ಪಿಟ್ಸ್‌ಬರ್ಗ್: ನಾಲ್ಕು ವರ್ಷಗಳಲ್ಲಿ ಅಧ್ಯಕ್ಷರಾಗಿ ಆಡಳಿತದಲ್ಲಿ ವಿಫಲವಾಗಿರುವ ಡೊನಾಲ್ಡ್ ಟ್ರಂಪ್‌ ಅವರನ್ನು ಈ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಮನವಿ ಮಾಡಿದರು.‌‌

ದೇಶವನ್ನು ಇಬ್ಭಾಗಗೊಳಿಸಿದ್ದ ಆಡಳಿತ ವ್ಯವಸ್ಥೆಯನ್ನು ಮೂರು ದಿನಗಳಲ್ಲಿ ಅಂತ್ಯಗೊಳಿಸಬಹುದು. ದೇಶದ ಹಿತಾಸಕ್ತಿ ರಕ್ಷಿಸಲು ವಿಫಲರಾದ ಮತ್ತು ದೇಶದಾದ್ಯಂತ ದ್ವೇಷದ ಬೆಂಕಿ ಹೊತ್ತಿಸಿದ ಅಧ್ಯಕ್ಷರನ್ನು ಈ ಮೂರು ದಿನಗಳಲ್ಲಿ ಸೋಲಿಸಬಹುದು ಎಂದು ಬೈಡನ್ ಹೇಳಿದರು. ಅಧ್ಯಕ್ಷ ಸ್ಥಾನಕ್ಕೆ ನ.3ರಂದು ಚುನಾವಣೆ ನಡಯಲಿದೆ.

‘ಅಮೆರಿಕನ್ನರು ಈ ಚುನಾವಣೆಯಲ್ಲಿ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುತ್ತಾರೆ ಎಂಬ ಅತೀವ ವಿಶ್ವಾಸ ನನ್ನದಾಗಿದೆ’ ಎಂದು ಅವರು ಹೇಳಿದರು. ‘ಮತದಾನದ ವೇಳೆ ಅಮೆರಿಕ್ಕೆ ಈ ಮಾತು ನೆನಪಾಗುತ್ತದೆ. ಈ ಮಾತು ನೆನಪಾಗುತ್ತದೆ ಎಂದರೆ ಸಂದೇಶ ಸ್ಪಷ್ಟವಾಗಿದೆ, ದೊಡ್ಡದಾಗಿದೆ ಎಂದರ್ಥ’ ಎಂದು ಹೇಳಿದರು.

‘ನಾವು ಸಾಕಷ್ಟುಕೆಲಸ ಮಾಡಬೇಕಿದೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಅದನ್ನು ಕಾರ್ಯಗತಗೊಳಿಸುತ್ತೇವೆ. ನಾವು ಕೋವಿಡ್–19 ಅನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ’ ಎಂದು ಅವರು ಭರವಸೆ ನೀಡಿದರು. ಅಧ್ಯಕ್ಷ ಟ್ರಂಪ್‌ ಅವರನ್ನು ಟೀಕಿಸಿದ ಅವರು, ‘ಕಳೆದ ಬಾರಿ ವಿಶ್ವಸಂಸ್ಥೆಯಲ್ಲಿ ಮಾತನಾಡಿದಾಗ ಅವರು ನಗೆಪಾಟಲಿಗೆ ಈಡಾಗಿದ್ದರು’ ಎಂದರು.

‘ವ್ಲಾಡಿಮಿರ್ ಪುಟಿನ್ ಅವರ ಆಟದ ಗೊಂಬೆಯಂತೆ ಇರುವ ಅಧ್ಯಕ್ಷನನ್ನು ನಾವು ಒಪ್ಪಿಕೊಳ್ಳಲು ಸಾಧ್ಯವೆ? ಅಫ್ಗಾನಿಸ್ತಾನದಲ್ಲಿ ನಿಯೋಜಿತರಾಗಿರುವ ಯೋಧರಿಗೆ ಪುಟಿನ್ ಭೀತಿ ಮೂಡಿಸಿದ್ದಾರೆ. ಟ್ರಂಪ್‌ ಅವರಿಗೆ ಪುಟಿನ್ ಎದುರಿಸಲು ಭೀತಿ ಇದೆ. ಅವರೊಬ್ಬರು ದುರ್ಬಲ ಅಧ್ಯಕ್ಷ’ ಎಂದು ಬೈಡನ್ ಟೀಕಿಸಿದರು.

‘ಅಂತರರಾಷ್ಟ್ರೀಯ ವೇದಿಕೆಯಲ್ಲಿಯೂ ಟ್ರಂಪ್ ಪ್ರಾಬಲ್ಯ ಹೊಂದಿಲ್ಲ. ಟ್ರಂಪ್, ತ್ಯಾಗವನ್ನು ಅರ್ಥ ಮಾಡಿಕೊಳ್ಳಲಾಗದ ಅಧ್ಯಕ್ಷ, ಧೈರ್ಯವಿಲ್ಲದ ಅಧ್ಯಕ್ಷ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT