ಮಂಗಳವಾರ, ಡಿಸೆಂಬರ್ 1, 2020
24 °C

ಅಮೆರಿಕದಲ್ಲಿ ಮತದಾನ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ ಮತದಾನ ಆರಂಭವಾಗಿದೆ. ವರ್ಜೀನಿಯಾ, ನ್ಯೂಯಾರ್ಕ್‌, ನ್ಯೂಜೆರ್ಸಿ ಮತ್ತು ಮೈನೆ ರಾಜ್ಯಗಳಲ್ಲಿ ಬೆಳಗ್ಗೆ 6ಕ್ಕೆ (ಭಾರತೀಯ ಕಾಲಮಾನ ಸಂಜೆ 4.30) ಮತದಾನ ಆರಂಭ
ವಾಯಿತು. ಕ್ಯಾಲಿಫೋರ್ನಿಯಾದಲ್ಲಿ ಬೆಳಗ್ಗೆ 7ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ) ಮತದಾನ ಆರಂಭವಾಯಿತು.

ಮತಗಟ್ಟೆಗಳ ಬಳಿ ಬೆಳಗ್ಗೆಯೇ ಮತದಾರರು ತಮ್ಮ ಸರದಿಗಾಗಿ ಕಾದು ನಿಂತಿದ್ದರು. ಮತದಾನ ಆರಂಭವಾಗಿರುವ ರಾಜ್ಯಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿತ್ತು. ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಅವರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಕರೆ ನೀಡಿದರು.

ಸುಮಾರು 23.9 ಕೋಟಿ ಅರ್ಹ ಮತದಾರರಲ್ಲಿ ಈಗಾಗಲೇ 10 ಕೋಟಿಯಷ್ಟು ಜನರು ಮುಂಚಿತ ಮತದಾನದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈಗ ಮತಗಟ್ಟೆಗಳಲ್ಲೂ ಜನರು ಸಾಲುಗಟ್ಟಿ ನಿಂತಿರುವುದರಿಂದ, ಈ ಬಾರಿ ಒಟ್ಟು ಮತದಾನದ ಪ್ರಮಾಣ ಏರಿಕೆಯಾಗುವ ನಿರೀಕ್ಷೆ ಇದೆ. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಭಾರತದ ಸುಮಾರು 25 ಲಕ್ಷಮತದಾರರು ಇದ್ದಾರೆ. ಇವರಲ್ಲಿ 13 ಲಕ್ಷ ಮತದಾರರು, ಅಧ್ಯಕ್ಷರಆಯ್ಕೆಯಲ್ಲಿ ಮಹತ್ವದ ಪಾತ್ರವಹಿ ಸುವ ‘ಬ್ಯಾಟಲ್‌ಗ್ರೌಂಡ್‌ ಸ್ಟೇಟ್‌’ ಗಳಲ್ಲಿ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು