ಬುಧವಾರ, ಮಾರ್ಚ್ 3, 2021
19 °C

ಟ್ರಂಪ್ ವಿದಾಯ ಸಂದೇಶ: ಹಗೆತನ ಮರೆತು ಸಮಾನ ಗುರಿಯೊಂದಿಗೆ ಮುನ್ನಡೆಯಲು ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಹಿಂದೆಂದಿಗಿಂತಲೂ ಹೆಚ್ಚಾಗಿ ಭಿನ್ನಾಭಿಪ್ರಾಯಗಳ ನಡುವೆ ಏಕತೆಯನ್ನು ತೋರಲು, ಪಕ್ಷಪಾತದ ಹಗೆತನವನ್ನು ಮೀರಿ ಬರಲು ಮತ್ತು ಸಮಾನ ಗುರಿಯತ್ತ ಮುನ್ನಡೆಯಲು ಡೊನಾಲ್ಡ್ ಟ್ರಂಪ್‌ ಕರೆ ನೀಡಿದ್ದಾರೆ.

ಅಮೆರಿಕವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿರಿಸುವಲ್ಲಿ ನೂತನ ಅಧ್ಯಕ್ಷ ಜೋ ಬೈಡನ್‌ಗೆ ಶುಭಾಶಯ ಕೋರುತ್ತಾ ಅವರ ಯಶಸ್ಸಿಗಾಗಿ ಪ್ರಾರ್ಥಿಸಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದಾಯದ ವಿಡಿಯೊ ಸಂದೇಶ ನೀಡಿದ್ದಾರೆ.

ಮೊದಲೇ ಚಿತ್ರೀಕರಿಸಿದ ಡೊನಾಲ್ಡ್ ಟ್ರಂಪ್ ಅವರ ವಿಡಿಯೊ ಸಂದೇಶವನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷ ಪದವಿ ವಹಿಸಿರುವುದು ವಿವರಣೆಗೂ ಮೀರಿದ ಗೌರವ ಎಂದವರು ಉಲ್ಲೇಖಿಸಿದ್ದಾರೆ. ಈ ವಿಶೇಷ ಸೌಲಭ್ಯಕ್ಕಾಗಿ ಧನ್ಯವಾದಗಳು. 

ಈ ವಾರ ನಾವು ಹೊಸ ಆಡಳಿತವನ್ನು ಉದ್ಘಾಟಿಸುತ್ತಿದ್ದು, ಅಮೆರಿಕವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿಸುವಲ್ಲಿ ಅದರ ಯಶಸ್ಸಿಗಾಗಿ ಪ್ರಾರ್ಥಿಸುತ್ತೇವೆ. ಹೊಸ ಅಧ್ಯಕ್ಷರಿಗೆ ನಮ್ಮ ಶುಭಾಶಯಗಳನ್ನು ಅರ್ಪಿಸುತ್ತಿದ್ದೇವೆ ಮತ್ತು ಅದೃಷ್ಟ ಅವರ ಪಾಲಿಗಿರಲೆಂದು ಬಯಸುತ್ತೇವೆ ಎಂದು ಶ್ವೇತಭವನದಿಂದ ನಿರ್ಗಮಿಸುತ್ತಿರುವ ಟ್ರಂಪ್ ತಿಳಿಸಿದ್ದಾರೆ.

ಇದನ್ನೂ ಓದಿ: 

ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ತಾವು ಹಾಜರಾಗುವುದಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಭಾರತೀಯ ಮೂಲದ ಕಮಲ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಮೆರಿಕ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿ ಪರಿಗಣಿಸಲ್ಪಟ್ಟಿರುವ ಜನವರಿ 6ರಂದು ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ತಮ್ಮ ಬೆಂಬಲಿಗರ ದಾಳಿಯನ್ನು ಡೊನಾಲ್ಡ್ ಟ್ರಂಪ್ ಮಗದೊಮ್ಮೆ ಖಂಡಿಸಿದರು. ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಭಿನ್ನಾಭಿಪ್ರಾಯಗಳ ನಡುವೆ ಏಕತೆಯನ್ನು ತೋರಬೇಕು, ಪಕ್ಷಪಾತದ ಹಗೆತನವನ್ನು ಮೀರಿ ಬರಬೇಕು ಮತ್ತು ಸಮಾನ ಗುರಿಯತ್ತ ಮುನ್ನಡೆಯಬೇಕು ಎಂದು ತಿಳಿಸಿದರು.

ಕ್ಯಾಪಿಟಲ್ ಮೇಲಿನ ದಾಳಿಯಿಂದ ಅಮೆರಿಕರನ್ನು ದಿಗ್ಭ್ರಮೆಗೊಂಡಿದ್ದಾರೆ. ರಾಜಕೀಯ ಹಿಂಸಾಚಾರವು ನಾವು ಪ್ರೀತಿಸುವ ಎಲ್ಲದರ ಮೇಲಿನ ದಾಳಿಯಾಗಿದೆ. ಇದನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹೇಳಿದರು.

ಜಗತ್ತಿನಲ್ಲಿ ಅಮೆರಿಕ ಶಕ್ತಿಯನ್ನು ಪುನಃಸ್ಥಾಪಿಸಿದ್ದೇವೆ. ಜಗತ್ತು ಮತ್ತೆ ನಮ್ಮನ್ನು ಗೌರವಿಸುತ್ತಿದೆ. ಆ ಗೌರವಗಳನ್ನು ಕಳೆದುಕೊಳ್ಳಬೇಡಿ ಎಂದು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಬಿಚ್ಚಿಟ್ಟರು. ಹೊಸ ಯುದ್ಧಗಳನ್ನು ಪ್ರಾರಂಭಿಸದ ಮೊದಲ ಅಧ್ಯಕ್ಷ ಎಂದೆನಿಸಿಕೊಳ್ಳಲು ಹೆಮ್ಮೆಯಿದೆ ಎಂದು 74ರ ಹರೆಯದ ಟ್ರಂಪ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು