ವಿಶ್ವಸಂಸ್ಥೆ: ಅಮೆರಿಕದ ಮೇಲೆ ಸೆ.11, 2001ರಂದು ಉಗ್ರರು ನಡೆಸಿದ ದಾಳಿಗೆ 20 ವರ್ಷಗಳು ತುಂಬಿದ್ದು,ಈ ಎರಡು ದಶಕಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ಒಗ್ಗಟ್ಟು ಮತ್ತು ಏಕತೆ ಪ್ರದರ್ಶಿಸಿದ್ದನ್ನು ಸ್ಮರಿಸುತ್ತೇವೆ‘ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯ ದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.

ʼಅಂದು ಇದೇ ದಿನ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 90 ದೇಶಗಳ ಸುಮಾರು 3 ಸಾವಿರ ಜನರು ಮೃತಪಟ್ಟಿ ದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ಲಕ್ಷಾಂತರ ಜನರ ಮನಸ್ಸಿನಲ್ಲಿ ನೋವಿನ ಕಾರ್ಮೋಡ ಕವಿದಿತ್ತು‘ ಎಂದು ಗುಟೆರಸ್ ಅವರು ಶುಕ್ರವಾರದ ಸಂದೇಶದಲ್ಲಿ ನೆನಪಿಸಿಕೊಂಡಿದ್ದಾರೆ.

‘ಅಮೆರಿಕದ ಈ ದಾಳಿಯ ನಂತರ, ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹಿಸಲು ಅಂತಾರಾಷ್ಟ್ರೀಯ ಸಮುದಾಯವು ತೋರುತ್ತಿರುವ ಒಗ್ಗಟ್ಟು, ಐಕ್ಯತೆ ಮತ್ತು ಸಂಕಲ್ಪವನ್ನು ನಾವು ಸ್ಮರಿಸುತ್ತೇವೆ‘ ಎಂದು ಗುಟೆರಸ್ ಸಂದೇಶದಲ್ಲಿ ತಿಳಿಸಿದ್ದಾರೆ.

‘ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ನಾವು ಅಮೆರಿಕದ ನ್ಯೂಯಾರ್ಕ್ ಹಾಗೂ ವಿಶ್ವದಾದ್ಯಂತ ಉಗ್ರ ಚಟುವಟಿಕೆಳಿಂದ ಸಂತ್ರಸ್ತರಾಗಿರುವ ಎಲ್ಲ ರಾಷ್ಟ್ರಗಳೊಂದಿಗೆ ಬೆಂಬಲವಾಗಿ ನಿಲ್ಲುತ್ತೇವೆ‘ ಎಂದು ಭರವಸೆ ನೀಡಿದ್ದಾರೆ.

2001ರ ಸೆಪ್ಪೆಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರದಅವಳಿ ಗೋಪುರಗಳಿಗೆ ಅಲ್‌ಖೈದಾ ಉಗ್ರರು ವಿಮಾನಗಳನ್ನು ನುಗ್ಗಿಸಿದ್ದರು. ಇದು ಅಮೆರಿಕದ ಇತಿಹಾಸದಲ್ಲೇ ಅತ್ಯಂತಭೀಕರಭಯೋತ್ಪಾದಕ ದಾಳಿ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.