ಭಾನುವಾರ, ನವೆಂಬರ್ 28, 2021
20 °C

ಕೋವ್ಯಾಕ್ಸಿನ್‌: ಡಬ್ಲ್ಯೂಎಚ್‌ಒ ಮುಖ್ಯಸ್ಥರೊಂದಿಗೆ ಆರೋಗ್ಯ ಸಚಿವ ಮಾಂಡವೀಯ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ/ಜಿನೀವಾ (ಪಿಟಿಐ): ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಮುಖ್ಯಸ್ಥ ಟೆಡ್ರೊಸ್‌ ಅಧಾನೋಮ್‌ ಘೆಬ್ರೆಯೆಸಸ್‌ ಅವರು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಅವರೊಂದಿಗೆ ಕೋವ್ಯಾಕ್ಸಿನ್‌ ಲಸಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. 

‘ಭಾರತದಲ್ಲಿ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮ ಕುರಿತು ಚರ್ಚಿಸಲು ಭಾರತದ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಅವರಿಗೆ ಕರೆ ಮಾಡಿದ್ದೆ. ಜಾಗತಿಕ ಸಾಂಕ್ರಾಮಿಕ ಒಪ್ಪಂದದ ಅವಶ್ಯಕತೆ, ಡಿಜಿಟಲ್‌ ಆರೋಗ್ಯ, ಸಾಂಪ್ರದಾಯಿಕ ಔಷಧ ವಿಷಯಗಳ ಚರ್ಚೆ ನಡೆಯಿತು. ಡಬ್ಲ್ಯೂಎಚ್‌ಒ ಬಲಪಡಿಸಲು ಭಾರತ ನೀಡುತ್ತಿರುವ ಬೆಂಬಲವನ್ನು ಸ್ವಾಗತಿಸುತ್ತೇವೆ’ ಎಂದು ಟೆಡ್ರೊಸ್‌ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.  

‘ಮಾಂಡವೀಯ ಅವರೊಂದಿಗೆ ಲಸಿಕೆಯ ನೀತಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಅಸ್ಟ್ರಾಜೆನೆಕಾ ಲಸಿಕೆಯ ಪೂರೈಕೆಯನ್ನು ಪುನರಾರಂಭಿಸುವುದು, ಕೋವ್ಯಾಕ್ಸಿನ್ ಅನ್ನು ತುರ್ತು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಮತ್ತು ತಂತ್ರಜ್ಞಾನ ಮೂಲಕ ಲಸಿಕೆಯ ಪರವಾನಗಿ ಹಂಚಿಕೆ ಕುರಿತು ಮಾತುಕತೆ ನಡೆಸಲಾಯಿತು’ ಎಂದು ಟೆಡ್ರೊಸ್‌ ಹೇಳಿದರು.

ಸಾಂಕ್ರಾಮಿಕದ ನಿರ್ವಹಣೆ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಡಬ್ಲ್ಯೂಎಚ್‌ಒನ ಸುಧಾರಣೆಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಟೆಡ್ರೊಸ್‌ ಅವರೊಂದಿಗೆ ಚರ್ಚೆ  ನಡೆಸಿರುವುದಾಗಿ ಮಾಂಡವೀಯ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು