ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಬರ್ಗ್ ವೈರಸ್‌ನ 2 ಶಂಕಿತ ಪ್ರಕರಣ ಪತ್ತೆ: ವಿಶ್ವಸಂಸ್ಥೆ

Last Updated 8 ಜುಲೈ 2022, 11:39 IST
ಅಕ್ಷರ ಗಾತ್ರ

ಜಿನಿವಾ: ಘಾನಾದಲ್ಲಿ ಎಬೊಲಾ ರೀತಿಯ ಮಾರ್ಬರ್ಗ್‌ ವೈರಸ್‌ ಕಾಯಿಲೆಯ ಎರಡು ಶಂಕಿತ ಪ್ರಕರಣಗಳು ವರದಿಯಾಗಿವೆ. ಇದು ದೃಢಪಟ್ಟರೆ ಪಶ್ಚಿಮ ಆಫ್ರಿಕಾದಲ್ಲಿ ಮೊದಲ ಬಾರಿಗೆ ಈ ರೀತಿಯ ಸೋಂಕು ಪತ್ತೆಯಾದಂತಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಡಬ್ಲ್ಯುಎಚ್‌ಒ ಪ್ರಕಾರ, ಘಾನಾದ ದಕ್ಷಿಣ ಪ್ರದೇಶದಲ್ಲಿ ಮೃತಪಟ್ಟ ಇಬ್ಬರು ರೋಗಿಗಳಿಂದ ತೆಗೆದ ಮಾದರಿಗಳ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಪಾಸಿಟಿವ್‌ ವರದಿ ಬಂದಿತ್ತು. ಆದರೆ, ಅವುಗಳ ದೃಢೀಕರಣಕ್ಕಾಗಿ ಡಬ್ಲ್ಯುಎಚ್‌ಒ ಜತೆ ಕಾರ್ಯನಿರ್ವಹಿಸುವ ಸೆನೆಗಲ್‌ನ ಪಾಶ್ಚರ್ ಇನ್‌ಸ್ಟಿಟ್ಯೂಟ್‌ಗೆ ರವಾನಿಸಲಾಗಿದೆ.ಜ್ವರ, ವಾಂತಿ, ಅತಿಸಾರ ಲಕ್ಷಣಗಳಿಂದ ಬಳಲುತ್ತಿದ್ದ ರೋಗಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT