ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ಉಗಮ ಪತ್ತೆಗೆ ತಂಡ ನಿಯೋಜನೆ

Last Updated 2 ಡಿಸೆಂಬರ್ 2021, 13:03 IST
ಅಕ್ಷರ ಗಾತ್ರ

ನೈರೋಬಿ, ಕೀನ್ಯಾ (ರಾಯಿಟರ್ಸ್‌): ಕೋವಿಡ್‌ ಹೊಸ ರೂಪಾಂತರ ತಳಿ ಓಮೈಕ್ರಾನ್‌ನ ಉಗಮ ಸ್ಥಾನದ ಕೇಂದ್ರಬಿಂದುವನ್ನು ಪತ್ತೆಹಚ್ಚಲು ದಕ್ಷಿಣ ಆಫ್ರಿಕಾದ ಗೌಟೆಂಗ್‌ ಪ್ರಾಂತ್ಯಕ್ಕೆ ತಂಡವೊಂದನ್ನು ನಿಯೋಜಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಗುರುವಾರ ಹೇಳಿದೆ.

ವೈರಸ್‌ ಮೇಲೆ ಕಣ್ಗಾವಲು ಇಡಲು ಮತ್ತು ಸಂಪರ್ಕ ಪತ್ತೆಹಚ್ಚುವಿಕೆಗೆ ಇದರಿಂದ ಸಹಾಯವಾಗುತ್ತದೆ. ಓಮೈಕ್ರಾನ್‌ ಪತ್ತೆಯಾದ ಬೋಟ್ಸವಾನ ಸ್ಥಳದಲ್ಲಿ ಅಗತ್ಯ ವೈದ್ಯಕೀಯ ಆಮ್ಲಜನಕ ಉತ್ಪಾದಿಸಲು ಮತ್ತು ನೆರವು ಹೆಚ್ಚಿಸಲು ತಂಡವು ತಾಂತ್ರಿಕ ನೆರವು ನೀಡುತ್ತದೆ ಎಂದು ಡಬ್ಲ್ಯುಎಚ್‌ಒನ ಆಫ್ರಿಕಾದ ಪ್ರಾದೇಶಿಕ ತುರ್ತು ನಿರ್ದೇಶಕ ಸಲಾಮ್ ಗುಯೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT