ಶನಿವಾರ, ಸೆಪ್ಟೆಂಬರ್ 18, 2021
27 °C

ಕೊರೊನಾ ವೈರಸ್‌ ಹೊಸ ತಳಿ ‘ಮ್ಯೂ’ ಲಸಿಕೆ ಪ್ರತಿರೋಧಕ: ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಿನಿವಾ: ಕೊರೊನಾ ವೈರಸ್‌ನ ಹೊಸ ತಳಿ ‘ಮ್ಯೂ’ ಬಗ್ಗೆ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಕೋವಿಡ್‌ ಲಸಿಕೆಗೆ ಈ ರೂಪಾಂತರ ತಳಿ ಪ್ರತಿರೋಧ ಒಡ್ಡುವ ಸಾಧ್ಯತೆಗಳಿವೆ ಎಂದು ಹೇಳಿದೆ.

‘ಮ್ಯೂ’ ಅಥವಾ ‘ಬಿ.1.621’ ಎಂಬ ವೈಜ್ಞಾನಿಕ ಹೆಸರಿನ ಇದನ್ನು ‘ಆಸಕ್ತಿದಾಯಕ ತಳಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ. ಈ ತಳಿಯ ಸೋಂಕಿನ ಪ್ರಸರಣದ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದೂ ಸಂಸ್ಥೆ ಹೇಳಿದೆ.

ಕೊರೊನಾ ವೈರಸ್‌ನ 5ನೇ ‘ಆಸಕ್ತಿದಾಯಕ ತಳಿ’ ಇದಾಗಿದೆ. ಈ ತಳಿ ಹಲವಾರು ಬಾರಿ ರೂಪಾಂತರಗೊಂಡಿರುವುದರಿಂದ ಲಸಿಕೆಗೆ ಪ್ರತಿರೋಧ ಒಡ್ಡುವ ಸಾಧ್ಯತೆಗಳು ಹೆಚ್ಚು. ಈ ವಾದವನ್ನು ದೃಢಪಡಿಸಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದೆ.

ಈ ತಳಿಯ ಪ್ರಕರಣಗಳು ಕಳೆದ ಜನವರಿಯಲ್ಲಿ ಕೊಲಂಬಿಯಾದಲ್ಲಿ ಮೊದಲ ಬಾರಿಗೆ ವರದಿಯಾಗಿದ್ದವು. ನಂತರ, ದಕ್ಷಿಣ ಅಮೆರಿಕ ಹಾಗೂ ಯುರೋಪ್‌ನ ಕೆಲವೆಡೆ ಅಧಿಕ ಸಂಖ್ಯೆಯ ಪ್ರಕರಣಗಳು ಕಂಡುಬಂದಿದ್ದವು ಎಂದು ಸಂಸ್ಥೆ ಬಿಡುಗಡೆ ಮಾಡಿರುವ ವಾರದ ವರದಿಯಲ್ಲಿ ಹೇಳಲಾಗಿದೆ.

ಅಮೆರಿಕ ಹಾಗೂ ಹಾಂಗ್‌ಕಾಂಗ್‌ನಲ್ಲಿ ಸಹ ಈ ತಳಿಯ ಪ್ರಕರಣಗಳು ವರದಿಯಾಗಿವೆ. ಜಾಗತಿಕವಾಗಿ ಈ ತಳಿಯ ಸೋಂಕಿನ ಪ್ರಕರಣಗಳ ಪ್ರಮಾಣ ಶೇ 0.1ಕ್ಕಿಂತಲೂ ಕಡಿಮೆ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು