ಹೊಸ ಆರ್ಥಿಕ ತಜ್ಞರೊಂದಿಗೆ ಆಡಳಿತ ನಡೆಸಲು ಸಿದ್ಧ: ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರು ಮಂಗಳವಾರ ಡೆಲ್‌ವೇರ್ ಕ್ಷೇತ್ರ ವಿಲ್ಮಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಆಡಳಿತದ ನೂತನ ಆರ್ಥಿಕ ತಜ್ಞರ ತಂಡವನ್ನು ಪರಿಚಯಿಸಿದರು.
ಈ ತಂಡದಲ್ಲಿ ಖಜಾಂಚಿ ಕಾರ್ಯದರ್ಶಿಯಾಗಿ ಜಾನೆಟ್ ಯೆಲ್ಲೆನ್, ಕಚೇರಿ ನಿರ್ವಹಣೆಯ ನಿರ್ದೇಶಕರಾಗಿ ಭಾರತೀಯ–ಅಮೆರಿಕನ್ ನೀರಾ ಟಂಡೆನ್, ಖಜಾಂಚಿ ಉಪಕಾರ್ಯದರ್ಶಿಯಾಗಿ ವಾಲ್ಲಿ ಅಡೆಯೆಮೊ, ಆರ್ಥಿಕ ಸಲಹೆಗಾರರ ಮಂಡಳಿಯ ಅಧ್ಯಕ್ಷರಾಗಿ ಸೆಸಿಲಿಯಾ ರೌಸೆ ಮತ್ತು ಮಂಡಳಿಯ ಸದಸ್ಯರಾಗಿ ಜಾರೆಡ್ ಬರ್ನ್‌ಸ್ಟೇನ್ ಮತ್ತು ಹೀಥರ್ ಬೌಶೆ ಇದ್ದಾರೆ.
ನಂತರ ಮಾತನಾಡಿದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ‘ಜೋ ಬೈಡೆನ್ ಪ್ರಕಟಿಸಿರುವ ಅನುಭವಿ ಆರ್ಥಿಕ ತಂಡದೊಂದಿಗೆ ದೇಶದ ಮುಂದಿನ ಆಡಳಿತ ನಡೆಸಲು ಸಜ್ಜಾಗಿದ್ದೇವೆ. ಈ ತಂಡದ ಜತೆ ನಾನು ಮತ್ತು ಬೈಡನ್ ಇರುತ್ತೇವೆ‘ ಎಂದು ಹೇಳಿದರು.
‘ಈ ತಂಡ ಅಮೆರಿಕದ ನಾಗರಿಕರ ಆರ್ಥಿಕ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ಸೂಚಿಸುವ ಮೂಲಕ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಸಹಕರಿಸಲಿದೆ‘ ಎಂದು ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.