ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲೆಕ್ಟ್ರೋಲ್ ಕಾಲೇಜ್ ಬೈಡನ್ ಗೆಲುವು ಪ್ರಕಟಿಸಿದರೆ, ನಾನು ಶ್ವೇತಭವನ ತೊರೆಯುವೆ‘

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಣೆ
Last Updated 27 ನವೆಂಬರ್ 2020, 5:34 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂದು ಪದೇ ಪದೇ ಆರೋಪಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ತಮ್ಮ ವರಸೆ ಬದಲಿಸಿದ್ದಾರೆ. ‘ಎಲೆಕ್ಟ್ರೋಲ್ ಕಾಲೇಜ್‌ನವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ವಿಜೇತರಾಗಿದ್ದರೆ ಎಂದು ಘೋಷಿಸಿದರೆ ನಾನು ಶ್ವೇತಭವನ ತೊರೆಯುತ್ತೇನೆ’ ಎಂದು ಹೇಳಿದ್ದಾರೆ.

ಮತದಾರರಿಗೆ ಕೃತಜ್ಞತೆ ಹೇಳುವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಎಲೆಕ್ಟ್ರೋಲ್ ಕಾಲೇಜಿನವರು ಬೈಡನ್ ಅವರನ್ನು ವಿಜೇತ ಎಂದು ಘೋಷಿಸಿದರೆ, ಖಂಡಿತಾ ಅದು ತಪ್ಪಾಗುತ್ತದೆ‘ ಎಂದೂ ಟ್ರಂಪ್ ಹೇಳಿದರು.

ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲೂ ಪತ್ರಕರ್ತರು, ‘ಎಲೆಕ್ಟ್ರೋಲ್ ಕಾಲೇಜ್‌ ಬೈಡನ್ ವಿಜೇತರಾಗಿದ್ದಾರೆ ಎಂದು ಘೋಷಿಸಿದರೆ ಏನು ಮಾಡತ್ತೀರಿ' ಎಂದು ಟ್ರಂಪ್‌ ಅವರನ್ನು ಪ್ರಶ್ನಿಸಿದರು. ಅದಕ್ಕೆ ಪ್ರಕ್ರಿಯಿಸಿದ ಟ್ರಂಪ್‌, ‘ಅದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ. ಬೈಡನ್ ಆಯ್ಕೆಯಾಗಿದ್ದಾರೆ ಎಂದು ಹೇಳಿದರೆ, ಅದು ತಪ್ಪಾಗುತ್ತದೆ‘ ಎಂದು ಪುನರುಚ್ಚರಿಸಿದರು.

‘ಅವರು ಗೆಲುವು ಪ್ರಕಟಿಸಿದ ಮೇಲೆ, ನಾನು ಶ್ವೇತಭವನದಿಂದ ಹೊರಡುತ್ತೇನೆ' ಎಂದು ಟ್ರಂಪ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT