ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಪ್ರಶ್ನಿಸಿದ ಟ್ರಂಪ್‌ ಕಾನೂನು ಹೋರಾಟದ ಬಿಲ್‌ ಪಾವತಿಸಲು ಸೂಚಿಸಿ: ಅರ್ಜಿ

Last Updated 6 ಏಪ್ರಿಲ್ 2021, 6:16 IST
ಅಕ್ಷರ ಗಾತ್ರ

ಮ್ಯಾಡಿಸನ್‌, ಅಮೆರಿಕ: ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದ ಶುಲ್ಕ 42,000 ಡಾಲರ್‌ ಅನ್ನು ಪಾವತಿಸುವಂತೆ ಟ್ರಂಪ್‌ ಅವರಿಗೆ ಸೂಚಿಸಬೇಕು ಎಂದು ಕೋರಿ ವಿಸ್ಕಾನ್ಸಿನ್‌ ರಾಜ್ಯದ ಗ್ರೀನ್‌ ಬೇ, ಕೆನೋಶಾ ಹಾಗೂ ರೆಸಿನ್‌ ನಗರಗಳ ಆಡಳಿತಗಳು ಕೋರ್ಟ್‌ ಮೊರೆ ಹೋಗಿವೆ.

ಇದೇ ವಿಷಯಕ್ಕೆ ಸಂಬಂಧಿಸಿ ಟ್ರಂಪ್‌ ಅವರಿಂದ 1,45,000 ಡಾಲರ್‌ ವಸೂಲಿ ಮಾಡುವ ಸಂಬಂಧ ನಿರ್ದೇಶನ ನೀಡುವಂತೆ ಕೋರಿ ವಿಸ್ಕಾನ್ಸಿನ್‌ನ ಗವರ್ನರ್‌ ಟೋನಿ ಎವರ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ, ಈ ಮೂರು ನಗರಗಳ ಆಡಳಿತಗಳು ಸಹ ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೋರ್ಟ್‌ ಮೆಟ್ಟಿಲೇರಿವೆ.

ಟ್ರಂಪ್‌ ಅವರು ಜೋ ಬೈಡನ್‌ ವಿರುದ್ಧ ವಿಸ್ಕಾನ್ಸಿನ್‌ನಲ್ಲಿ 21,000 ಮತಗಳಿಂದ ಪರಾಭವಗೊಂಡಿದ್ದರು. ಈ ಸೋಲನ್ನು ಅರಗಿಸಿಕೊಳ್ಳಲಾಗದ ಟ್ರಂಪ್‌, ವಿಸ್ಕಾನ್ಸಿನ್‌ನಲ್ಲಿ ನಡೆದ ಮತದಾನ ಪ್ರಕ್ರಿಯೆಯೇ ಅಸಮರ್ಪಕ ಎಂದು ದೂರಿದ್ದರು.

ಈ ರಾಜ್ಯದಲ್ಲಿನ ಮತದಾನ ಪ್ರಕ್ರಿಯೆಯನ್ನು ಪ್ರಶ್ನಿಸಿ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್‌ನಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಬ್ರೆಟ್‌ ಲುಡ್ವಿಗ್‌, ಟ್ರಂಪ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ತೀರ್ಪು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT