ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಫ್‌ ಬೆಜೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ 82 ವರ್ಷದ ಮಹಿಳಾ ಪೈಲಟ್‌

Last Updated 1 ಜುಲೈ 2021, 15:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಉದ್ಯಮಿ ಜೆಫ್‌ ಬೆಜೋಸ್‌ ಅವರೊಂದಿಗೆ ಎಂಬತ್ತೆರಡು ವರ್ಷ ವಯಸ್ಸಿನ ಮಹಿಳಾ ಪೈಲಟ್‌ ಒಬ್ಬರು ಜೊತೆಯಾಗಲಿದ್ದಾರೆ.

ನ್ಯೂ ಶೆಫರ್ಡ್‌ ಬಾಹ್ಯಾಕಾಶ ನೌಕೆಯಲ್ಲಿ ಜುಲೈ 20ರಂದು ಬೆಜೋಸ್‌ ಜೊತೆಗೆ ವಾಲಿ ಫಂಕ್‌ ಪ್ರಯಾಣಿಸಲಿದ್ದಾರೆ. ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಹಿರಿಯ ವ್ಯಕ್ತಿಯಾಗಿ ಫಂಕ್‌ ಹೆಸರು ದಾಖಲಾಗಲಿದೆ.

ಬಾಹ್ಯಾಕಾಶ ಪ್ರಯಾಣಕ್ಕೆ ಗಗನಯಾತ್ರಿಗಳಿಗೆ ನೀಡುವ ತರಬೇತಿಯನ್ನು ಅಮೆರಿಕದಲ್ಲಿ 1960ರಿಂದ 1961ರವರೆಗೂ 'ಮರ್ಕ್ಯುರಿ 13' ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಪೈಲಟ್‌ಗಳಿಗೆ ನೀಡಲಾಗಿತ್ತು. ಆ ತರಬೇತಿ ಪಡೆದಿದ್ದವರ ಪೈಕಿ ಫಂಕ್‌ ಸಹ ಒಬ್ಬರು.

ಬಾಹ್ಯಾಕಾಶ ನೌಕೆಯೊಳಗಿನ ಕ್ರೂ ಕ್ಯಾಪ್ಸ್ಯೂಲ್‌ನ ಚಿತ್ರ
ಬಾಹ್ಯಾಕಾಶ ನೌಕೆಯೊಳಗಿನ ಕ್ರೂ ಕ್ಯಾಪ್ಸ್ಯೂಲ್‌ನ ಚಿತ್ರ

ಜುಲೈ 20 'ಅಪೊಲೊ 11 ನೌಕೆಯು' ಚಂದ್ರನ ಮೇಲೆ ಇಳಿದ ದಿನದ ವಾರ್ಷಿಕೋತ್ಸವ. ಅದೇ ದಿನ ಟೆಕ್ಸಾಸ್‌ನಿಂದ ಬಾಹ್ಯಾಕಾಶದ ಪ್ರಯಾಣ ಆರಂಭವಾಗಲಿದೆ.

ಬ್ಲೂ ಆರಿಜಿನ್‌ನ ಬಿಲಿಯನೇರ್ ಸಂಸ್ಥಾಪಕ ಜೆಫ್ ಬೆಜೋಸ್ ತಮ್ಮ ಕಂಪನಿಯ ಮೊದಲ ಸಬ್ ಆರ್ಬಿಟಲ್ ಸೈಟ್ ಸೀಯಿಂಗ್ ಪ್ರಯಾಣದಲ್ಲಿ ತಾವು ಮತ್ತು ತಮ್ಮ ಸಹೋದರ ಮಾರ್ಕ್‌ ಬಾಹ್ಯಾಕಾಶ ನೌಕೆ 'ನ್ಯೂ ಶೆಫರ್ಡ್‌ನ' ಪ್ರಯಾಣಿಕರಾಗಿರುತ್ತೇವೆ ಎಂದು ಕಳೆದು ತಿಂಗಳು ಹೇಳಿದ್ದರು. ಹರಾಜು ಮೂಲಕ ವಿಜೇತರಾದ ವ್ಯಕ್ತಿ ಸಹ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT