ಸೋಮವಾರ, ಆಗಸ್ಟ್ 2, 2021
23 °C

ಕೋವಿಡ್ ಸಮಯದಲ್ಲಿ ಒತ್ತಡ ನಿಯಂತ್ರಿಸುವ ಪ್ರಬಲ ಅಸ್ತ್ರವಾಗಿದೆ ಯೋಗ: ಭಾರತ ರಾಯಭಾರಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಏಳನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗಾಭ್ಯಾಸ ಮಾಡುವುದು ಅವಶ್ಯಕ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ರಾಯಭಾರಿಯಾಗಿರುವ ಟಿ.ಎಸ್‌. ತಿರುಮೂರ್ತಿ ಅವರು ಒತ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಸೋಮವಾರ ಮಾತನಾಡಿರುವ ಅವರು, ʼಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಆತಂಕ ಮತ್ತು ಖಿನ್ನತೆಯಿಂದಾಗುವ ಒತ್ತಡದ ಪರಿಣಾಮವನ್ನು ನಿಯಂತ್ರಿಸಲು ನೆರವಾಗುವ ಶಕ್ತಿಶಾಲಿ ಸಾಧನವಾಗಿ ಯೋಗ ವಿಶೇಷವಾಗಿ ಹೊರಹೊಮ್ಮಿದೆʼ ಎಂದಿದ್ದಾರೆ.

ಯೋಗವು ವ್ಯಕ್ತಿಯು ತನ್ನೊಂದಿಗೆ ಪ್ರಪಂಚ ಮತ್ತು ಪ್ರಕೃತಿಯಲ್ಲಿನ ಏಕತಾ ಪ್ರಜ್ಞೆಯನ್ನು ಕಂಡುಕೊಳ್ಳಲು ಒಂದು ಅನನ್ಯವಾದ ಮಾರ್ಗವಾಗಿದೆ. ಇದು ಭಾಷೆ, ಧರ್ಮ, ಸಂಸ್ಕೃತಿ ಮತ್ತು ಭೌಗೋಳಿಕ ಅಡೆತಡೆಗಳನ್ನು ಮೀರಿರುವುದಾಗಿದೆ ಎಂದು ವಿವರಿಸಿದ್ದಾರೆ.

ಮುಂದುವರಿದು, ʼಯೋಗದ ಜಾಗತಿಕ ಮನ್ನಣೆಯು ಅದರ ಸಾರ್ವತ್ರಿಕ ಪ್ರಯೋಜನಗಳಲ್ಲಿ ಖಚಿತವಾಗಿ ನೆಲೆಗೊಂಡಿದೆ. ಇದೇ ಕಾರಣಕ್ಕೆ ಜೂನ್‌ 21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವ ನಿರ್ಣಯವನ್ನು  ಎಲ್ಲ ಸದಸ್ಯ ರಾಷ್ಟ್ರಗಳು ಸರ್ವಾನುಮತದಿಂದ ಒಪ್ಪಿಕೊಂಡಿವೆʼ ಎಂದೂ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು