ಬುಧವಾರ, ಸೆಪ್ಟೆಂಬರ್ 28, 2022
27 °C

ಬಾಂಗ್ಲಾದಲ್ಲಿ ಹಿಂದೂಗಳಿಗೆ ಸಮಾನ ಹಕ್ಕಿದೆ: ಪ್ರಧಾನಿ ಶೇಖ್‌ ಹಸೀನಾ

ಪಿಟಿಐ Updated:

ಅಕ್ಷರ ಗಾತ್ರ : | |

ಢಾಕಾ: ‘ದೇಶದಲ್ಲಿ ನನಗೆಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ನಿಮಗೂ ಇದೆ’ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಬಾಂಗ್ಲಾದ ಹಿಂದೂಗಳನ್ನು ಉದ್ದೇಶಿಸಿ ಹೇಳಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಗುರುವಾರ ಹಿಂದೂ ಸಮುದಾಯದ ಮುಖಂಡರ ಜತೆ ಸಂವಾದ ನಡೆಸಿದ ಹಸೀನಾ ಅವರು, ‘ದುರ್ಗಾ ಪೂಜೆ ವೇಳೆ ಪಶ್ಚಿಮ ಬಂಗಾಳಕ್ಕಿಂತ ಹೆಚ್ಚಿನ ಪೆಂಡಾಲ್‌ಗಳು ಢಾಕಾದಲ್ಲಿ ಇರುತ್ತವೆ’ ಎಂದಿದ್ದಾರೆ.

‘ದೇಶದಲ್ಲಿ ಭಿನ್ನ ಧರ್ಮಗಳನ್ನು ಪಾಲನೆ ಮಾಡುತ್ತಿರುವವರು ತಮ್ಮನ್ನು ತಾವು ಅಲ್ಪಸಂಖ್ಯಾತರೆಂದು ಭಾವಿಸಬಾರದು. ಎಲ್ಲ ಧರ್ಮೀಯರಿಗೂ ಇಲ್ಲಿ ಸಮಾನ ಹಕ್ಕುಗಳಿವೆ’ ಎಂದು ಅವರು ಹೇಳಿದ್ದಾರೆ.

‘ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾವುದೇ ಹಕ್ಕುಗಳಿಲ್ಲ ಎಂದು ಕೆಲವರು ದುರುದ್ದೇಶದಿಂದ ಅಪ ಪ್ರಚಾರ ಮಾಡಿದ್ದಾರೆ. ಅಂಥವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಇಂಥ ಅಪಪ್ರಚಾರಕ್ಕೆಲ್ಲ ಕಿವಿಗೊಡಬೇಡಿ’ ಎಂದು ಅವರು ಹಿಂದೂಗಳಲ್ಲಿ ಮನವಿ ಮಾಡಿದ್ದಾರೆ.

2022ರ ಜನಗಣತಿ ಪ್ರಕಾರ ಬಾಂಗ್ಲಾದೇಶ 16.15 ಕೋಟಿ ಜನಸಂಖ್ಯೆಯಿದ್ದು, ಈ ಪೈಕಿ ಶೇ 7.95 ರಷ್ಟು ಜನರು ಹಿಂದೂಗಳಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು