ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಲಿ ಒಡವೆಯ ಗೊಡವೆ

Last Updated 7 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಫ್ಯಾಷನ್ ಜಗತ್ತಿನಲ್ಲಿ ಹೊಸ ಡಿಸೈನ್‍ಗಳು ಅತಿ ಕಡಿಮೆ ಅವಧಿ ಪ್ರಾಧಾನ್ಯ ಉಳಿಸಿಕೊಳ್ಳುತ್ತವೆ. ಆದರೆ ಆಕರ್ಷಕ ಮಾದರಿಯ ಚಾಕರ್ ನೆಕ್‍ಲೆಸ್ ಇಯರ್‌ಕಪ್‌ ಒಳಗೊಂಡ ಮುತ್ತಿನ ಹರಳುಗಳಿಂದ ಕೂಡಿದವುಗಳು ಇಂದಿಗೂ ತಮ್ಮ ಪ್ರಕಾಶಮಾನತೆಯಿಂದ ಹೆಂಗಳೆಯರ ಮನಸೂರೆಗೊಳ್ಳುತ್ತವೆ. ಈ ಒಡವೆಗಳ ಆಯ್ಕೆ ಕೇವಲ ಅಲಂಕಾರ ಬಿಂದುವಲ್ಲದೆ ಬದಲಿಗೆ ನಿಮ್ಮ ಅಭಿರುಚಿಯ ವ್ಯಕ್ತಿತ್ವದ ಸ್ವಭಾವವನ್ನು ತಿಳಿಸುತ್ತದೆ. ಈ ಜ್ಯುವೆಲರ್ರ್ಸ್ ಆಯ್ಕೆ ಫ್ಯಾಷನ್ ಜಗತ್ತಿಗೆ ನೀವೆಷ್ಟು ಬೇಗ ಅಪ್‌ಡೇಟ್ ಆಗಿದ್ದೀರೆಂದು ಸಾರುತ್ತದೆ. ಏಕೆಂದರೆ ಪ್ರತಿದಿನ ಹೊಸ ಹೊಸ ತರಹೇವಾಗಿ ಡಿಸೈನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಕೆಲವು ಹೊಸ ಟ್ರೆಂಡ್‍ಗಳು

ದೊಡ್ಡ ಏಕರತ್ನಾಭರಣ: ಹೊಸ ವಿನ್ಯಾಸದ ವಜ್ರದ ಹಾಗಿರುವ ಆಶ್ಚರ್, ಎಮೆರಾಲ್ಡ್, ಪ್ರಿನ್ಸ್‌ಸ್‌ಗಳು ವಿಶೇಷವಾಗಿ ನಿಶ್ಚಿತಾರ್ಥದ ಉಂಗುರಗಳಿಗೆ ಹೊಂದುತ್ತವೆ. ಇದೇ ಮಾದರಿಯ ಬಳೆಗಳು, ಮಲ್ಟಿಲೈನ್ಸ್ ನೆಕ್‍ಲೆಸ್‍ಗಳು ಆತ್ಯಾಕರ್ಷಕವಾಗಿ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿವೆ.

ವಜ್ರಲೇಪಿತ: ವಜ್ರದ ಮಾದರಿಯ ಹರಳುಗಳು ದಿನನಿತ್ಯದ ಅವಿಭಾಜ್ಯವೆಂಬಂತೆ ಸ್ಥಾನ ಪಡೆದಿದೆ. ಒಂಟಿರೇಖೆಯ ಅಥವಾ ಗೆರೆಯ ವಜ್ರದ ಕೊರಳ ಸರ, ಬಳೆಗಳು ಯುವತಿಯರನ್ನುಹೆಚ್ಚು ಆಕರ್ಷಿಸುತ್ತಿವೆ. ಸಿಂಪಲ್ ಆಗಿರುವ ಕಾರಣ ಪ್ರತಿದಿನ ನಿರಾಯಾಸವಾಗಿ ತೊಡಬಹುದಾದ ಗುಣವೂ ಕೆಲವರಿಗೆ ಇಷ್ಟವಾಗುತ್ತದೆ.

ಚಾಕರ್ ನೆಕ್‍ಲೆಸ್: ಇವುಗಳು ಮದುವೆ ಸಮಾರಂಭಗಳಲ್ಲಿ ಹೆಚ್ಚು ಗಮನ ಸೆಳೆದು ದಿರಿಸಿಗೆ ತಕ್ಕಂತೆ ಸೂಕ್ತವಾಗಿ ಕತ್ತನ್ನು ಅಲಂಕರಿಸುತ್ತವೆ. ಅದಕ್ಕೆ ಅಂಟಿಕೊಂಡಂತಹ ಡೈಮಂಡ್ ಅಥವಾ ಮಧ್ಯಭಾಗದಲ್ಲಿ ದೊಡ್ಡ ಹರಳುಗಳು ಹೆಚ್ಚು ಸೂಕ್ತ. ಆಯ್ಕೆ ಮಾಡುವಾಗ ಅಳತೆಗೆ ತಕ್ಕಂತೆ, ಧಿರಿಸಿಗೆ ಹೊಂದುವಂತೆ ಕೊಂಡುಕೊಳ್ಳಬೇಕು. ಅತ್ಯಂತ ಉದ್ದದ ಗೆರೆಗಳುಳ್ಳ ಚಾಕರ್ ನೆಕ್‍ಲೆಸ್‍ಗಳು ಗ್ರ್ಯಾಂಡ್ ಲುಕ್ ಕೊಟ್ಟರೂ ಆಕರ್ಷಣೆಯಲ್ಲಿ ಪ್ರಖರತೆ ಇರುವುದಿಲ್ಲ.

ಇಯರ್ ಕಫ್ಸ್: ತರುಣಿಯರ ಅಭಿರುಚಿಗೆ ತಕ್ಕಂತಹ ಡಿಸೈನ್‍ಗಳು ಹೊಸ ಟ್ರೆಂಡ್ ಸೃಷ್ಟಿಸಿ ದೀರ್ಘಚಿತ್ತಾಕರ್ಷಕ ಸೃಷ್ಟಿಸಿದೆ. ವಿವಿಧ ಭಂಗಿಯ ಪ್ರಾಣಿಗಳ, ಹೂವಿನ ಚಿತ್ತಾರವಿರುವ ಇಯರ್‌ಕಫ್ಸ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಹರಳುಗಳ ಹೊರತಾಗಿಯೂ ಅರ್ಧ ಚಂದ್ರ, ಪತಂಗ, ಸುರುಳಿ, ಹಕ್ಕಿ ರೆಕ್ಕೆಯ ಡಿಸೈನ್‍ಗಳು ವಿಶೇಷವಾಗಿ ಕಣ್ಮನ ಸೆಳೆಯುತ್ತವೆ. ಮಲ್ಟಿ ಲೇಯರ್‌ಗಳು ಸಹ ತನ್ನ ಮನೋಹರತೆಯನ್ನು ಹೆಚ್ಚಿಸುತ್ತವೆ.

ಭಾರತೀಯರ ಹೆಂಗಸರ ಚರ್ಮಕ್ಕೆ ಎಲ್ಲ ನಮೂನೆಯ ಬಣ್ಣದ ಜುವೆಲರ್ಸ್ ಹೊಂದುತ್ತವೆ. ಫಚ್‍ಸಿಯಾ, ಲೈಟ್ ಬ್ಲೂ, ಐವೊರಿ, ಲೈಮ್ ಗ್ರೀನ್‌ ಕಲರ್ ಕಾಂಬಿನೇಷನ್‍ಗಳು ಭಾರತೀಯ ಹೆಂಗಳೆಯರಿಗೆ ಸೂಕ್ತವಾಗಿ ಅಲಂಕೃತವಾಗಿ ಹೊಂದುತ್ತವೆ ಎನ್ನುವುದು ಫ್ಯಾಷನ್ ಡಿಸೈನರ್‌ಗಳಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT