ಬೆಂಗಳೂರು: ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯ 2019ನೇ ಸಾಲಿನ ‘ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ‘ಗಾಗಿ ಲೇಖಕರಿಂದ ಅರ್ಜಿ ಆಹ್ವಾನಿಸಿದೆ.

ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.2019ರ ಜನವರಿಯಿಂದ ಡಿಸೆಂಬರ್ ತಿಂಗಳ ಒಳಗೆ ಪ್ರಕಟವಾಗಿರುವ ಕನ್ನಡದ ಕೃಷಿ ಪುಸ್ತಕಗಳ ತಲಾ ಮೂರು ಪ್ರತಿಯನ್ನು ಕಳುಹಿಸಬೇಕು.

ನಿಯಮ ಮತ್ತು ನಿಬಂಧನೆಗಳು

ಪುಸ್ತಕವು ಸ್ವಂತ ರಚನೆಯಾಗಿರಬೇಕು. ಅನುವಾದಿತ ಕೃತಿಯಾಗಿರಬಾರದು. ಇತರ ಲೇಖಕರ ಬರಹಗಳ ಸಂಪಾದಿತ ಕೃತಿಯಾಗಿರಬಾರದು. ಪುಸ್ತಕವು ಮೊದಲ ಪ್ರಕಟಣೆ/ಆವೃತ್ತಿಯಾಗಿರಬೇಕು. ಮರುಮುದ್ರಿತ/ಪರಿಷ್ಕರಿಸಿ ಮರುಮುದ್ರಿಸಿದ ಪುಸ್ತಕವಾಗಿರಬಾರದು. ಪುಸ್ತಕವು ಕನಿಷ್ಠ 1/8 ಕ್ರೌನ್ ಅಳತೆಯ (ತಾಂತ್ರಿಕ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 50 ಪುಟಗಳಷ್ಟಾದರೂ ಇರಬೇಕು. ಈ ಪ್ರಶಸ್ತಿ ನೀಡುವುದು ಲೇಖಕರಿಗೆ ಮಾತ್ರ. ಪ್ರಕಾಶಕರಿಗೆ / ಮುದ್ರಕರಿಗೆ ಅಲ್ಲ.

ಪ್ರಶಸ್ತಿಗಾಗಿ ಪುಸ್ತಕ ಕಳುಹಿಸಲು ಕೊನೆಯ ದಿನ– ಜುಲೈ 31, 2020.ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560 065.

ಪುಸ್ತಕ ಪ್ರಶಸ್ತಿ ಅರ್ಜಿ ನಮೂನೆಯನ್ನು uasbangalore.edu.in ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆkannada.uas@gmail.com ಮೇಲ್ ವಿಳಾಸಕ್ಕೆ ಬರೆದು ಮಾಹಿತಿ ತಿಳಿಯಬಹುದು. ದೂರವಾಣಿ ಸಂಖ್ಯೆ: 080-23330239ಕ್ಕೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.