ಬುಧವಾರ, ಜುಲೈ 6, 2022
23 °C

15ರಂದು ವಿಚಾರಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಸಮೀಪದ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಬೆಸ್ಸ್ಟ್ ಹಾರ್ಟ್ ಸಹಯೋಗದಲ್ಲಿ ಮಾರ್ಚ್‌ 15ರಂದು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಿದೆ.

ವಿಚಾರ ಸಂಕಿರಣದಲ್ಲಿ ಸಸ್ಯ ಆರೋಗ್ಯ ನಿರ್ವಹಣಾ ತಂತ್ರಜ್ಞಾನ ಮತ್ತು ಹೊಸ ಉದ್ಯಮದ ತಾಂತ್ರಿಕ ವಿಷಯಗಳ ಚರ್ಚಿಸಲಾಗುತ್ತದೆ. ಸೂಕ್ಷ್ಮಜೀವಿ ಒಕ್ಕೂಟದ ತಂತ್ರಜ್ಞಾನ, ಕೋಕೊಪಿಟ್‌ ತಂತ್ರಜ್ಞಾನ, ಜೈವಿಕ ರೋಗ ನಿರೋಧಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಉಪಯುಕ್ತಕತೆ, ಉತ್ಪಾದಕತೆಗಳ ಕುರಿತು ರೈತ – ವಿಜ್ಞಾನಿಗಳ ನಡುವೆ ಸಮಾಲೋಚನೆಯೂ ಇರುತ್ತದೆ.

ಹೊಸ ಉದ್ಯಮ ಆರಂಭಿಸುವವರು ಅನುಸರಿಸಬೇಕಾದ ತಂತ್ರಗಳ ಬಗ್ಗೆ ವಿಷಯ ತಜ್ಞರು ಉಪಯುಕ್ತ ಮಾಹಿತಿ ನೀಡಲಾಗುತ್ತದೆ. ಹೊಸ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿರುವ ಉದ್ಯಮಿಗಳು ತಮ್ಮ ಗೆಲುವಿನ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ. ಜತೆಗೆ, ಸಲಹೆಗಳು ನೀಡಲಿದ್ದಾರೆ. ಆಸಕ್ತ ರೈತರು ಈ ಕಾರ್ಯಕ್ರಮದಲ್ಲಿ ಭಾಗಹಿಸಬಹುದು.

ವಿಚಾರ ಸಂಕಿರಣ ಕುರಿತು ಹೆಚ್ಚಿನ ಮಾಹಿತಿಗಾಗಿ +918197926903 ಗೆ ಕರೆ ಮಾಡಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು