ನೇಷನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿ: ಲುಕಾಕು ಮಿಂಚು; ಬೆಲ್ಜಿಯಂಗೆ ಜಯ

ರೆಕ್‌ಜಾವಿಕ್‌, ಐಸ್‌ಲ್ಯಾಂಡ್‌: ರೊಮೆಲು ಲುಕಾಕು ಹಾಗೂ ಈಡನ್‌ ಹಜಾರ್ಡ್‌ ಅವರು ಗಳಿಸಿದ ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡವು ನೇಷನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ 3–0ಯಿಂದ ಐಸ್‌ಲ್ಯಾಂಡ್‌ ತಂಡವನ್ನು ಮಣಿಸಿತು.

ರಷ್ಯಾದಲ್ಲಿ ನಡೆದಿದ್ದ ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ ಅಮೋಘ ಸಾಮರ್ಥ್ಯ ಮೆರೆದಿದ್ದ ಲುಕಾಕು ಈ ಪಂದ್ಯದಲ್ಲೂ ಮಿಂಚಿದರು. ಅವರು ಈ ಹಣಾಹಣಿಯಲ್ಲಿ ಒಟ್ಟು ಎರಡು ಗೋಲುಗಳನ್ನು ದಾಖಲಿಸಿದರು. 

ಪಂದ್ಯದ 29ನೇ ನಿಮಿಷದಲ್ಲಿ ಈಡನ್‌ ಹಜಾರ್ಡ್‌ ಅವರು ಮೊದಲ ಗೋಲು ಗಳಿಸಿ ತಂಡಕ್ಕೆ 1–0ಯ ಮುನ್ನಡೆ ತಂದುಕೊಟ್ಟರು. ನಂತರ ಅವಧಿಯಲ್ಲಿ ಬೆಲ್ಜಿಯಂ ಬಿರುಸಿನ ಆಟವಾಡಿತು. ಬಲಿಷ್ಠ ತಂಡದ ಎದುರು ಐಸ್‌ಲ್ಯಾಂಡ್‌ ತಂಡದ ಆಟವು ಸಪ್ಪೆಯಾಯಿತು. ಇದೇ ವೇಳೆ ಬೆಲ್ಜಿಯಂನ ಮಂಚೂಣಿ ವಿಭಾಗದ ಆಟಗಾರ ಲುಕಾಕು ಅವರು ಎರಡು ಬಾರಿ ಚೆಂಡನ್ನು ಗುರಿ ಸೇರಿಸಿ ತಂಡದ ಗೆಲುವನ್ನು ಸುಲಭ ಮಾಡಿಕೊಟ್ಟರು. 

 

ಪ್ರಮುಖ ಸುದ್ದಿಗಳು