ಷರೀಫ್, ಮರಿಯಮ್‌ಗೆ ಪೆರೋಲ್

ಇಸ್ಲಾಮಾಬಾದ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್, ಅವರ ಪುತ್ರಿ ಮರಿಯಮ್ ಹಾಗೂ ಅಳಿಯ ಮೊಹಮ್ಮದ್ ಸಫ್ದಾರ್ ಅವರಿಗೆ ಮೂರು ದಿನ ಪೆರೋಲ್ ನೀಡಲಾಗಿದೆ. ಶುಕ್ರವಾರ ನಡೆಯಲಿರುವ ಬೇಗಂ ಕುಲ್ಸೂಮ್ ಅವರ ಅಂತ್ಯಕ್ರಿಯೆಯಲ್ಲಿ ಇವರು ಭಾಗಿಯಾಗಲಿದ್ದಾರೆ.

ಷರೀಫ್ ಅವರ ನಿವಾಸ ‘ಜತಿ ಉಮ್ರಾ’ವನ್ನು ತಾತ್ಕಾಲಿಕ ಉಪಕಾರಾಗೃಹ ಎಂದು ಘೋಷಿಸಲಾಗಿದೆ.

ಆರಂಭದಲ್ಲಿ 12 ಗಂಟೆ ಪೆರೋಲ್ ನೀಡಲಾಗಿತ್ತು. ಅದನ್ನು ಮೂರು ದಿನ ವಿಸ್ತರಿಸಲಾಗಿದೆ. ಐದು ದಿನ ನೀಡುವಂತೆ ಷರೀಫ್ ಕುಟುಂಬ ಮನವಿ ಮಾಡಿತ್ತು.

ಕುಲ್ಸೂಮ್ ಅವರ ಅಂತ್ಯಕ್ರಿಯೆ ಒಂದು ವೇಳೆ ವಿಳಂಬವಾದರೆ, ಪೆರೋಲ್ ಅವಧಿ ವಿಸ್ತರಣೆಯಾಗಲಿದೆ ಎಂದು ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳು