ಬಾಲಿವುಡ್ನ ಮುದ್ದಾದ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ. ಅವರಿಬ್ಬರು ಈಚೆಗೆ ಇಟಲಿಯ ಲೇಕ್ ಕೊಮೊದಲ್ಲಿ ಹಸೆಮಣೆ ಏರಿದ್ದರು. ಅಲ್ಲಿಂದ ಸೀದಾ ಬೆಂಗಳೂರಿಗೆ ಬಂದಿದ್ದ ಈ ಜೋಡಿ ಅದ್ಧೂರಿಯಾಗಿಯೇ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ರಿಸೆಪ್ಷನ್ ಮಾಡಿಕೊಂಡು ಮುಂಬೈಗೆ ಹಾರಿದ್ದರು.

ಜನರ ಕಣ್ಣಿಗೆ ಕಂಡೂ ಕಾಣದಂತೆ ಹಾಗೇ ಬಂದು ಹೀಗೆ ಮಾಯವಾಗಿದ್ದ ಅವರು, ಹೆಚ್ಚುಕಮ್ಮಿ ತಿಂಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದಿದೆ. ಜ.1ರ ವರೆಗೆ ಇಲ್ಲೇ ಇರಲಿದ್ದಾರೆ!

ಹೌದು, ರಣವೀರ್ ಹಾಗೂ ದೀಪಿಕಾ ಅವರ ರೂಪವು ನಗರದ ಯುಬಿ ಸಿಟಿಯ ಬಳಿ ಇರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ನ ಅಂಗಳದಲ್ಲಿ ಆಯೋಜಿಸಿರುವ ಕೇಕ್ ಶೋದಲ್ಲಿ ಮೈದಳೆದಿದೆ. ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ ಸಂಸ್ಥೆಯ ವಿದ್ಯಾರ್ಥಿಗಳು ರಣವೀರ್ ಹಾಗೂ ದೀಪಿಕಾರಂತೆ ಕಾಣುವ ಕಾರ್ಟೂನ್ ಮಾದರಿಯ ಕಲಾಕೃತಿಯನ್ನು ಕೇಕ್ನಲ್ಲಿ ರಚಿಸಿದ್ದಾರೆ.

ಪೂರ್ವಾ, ಮನೀಷ್, ಮಹೇಶ್, ಚಿನ್ನು ಹಾಗೂ ಶ್ವೇತಾ ಅವರ ಕೈಚಳಕದಲ್ಲಿ ಸುಂದರವಾಗಿ ಅರಳಿದ ಈ ಕ್ಯಾರಿಕೇಚರ್ ಕೇಕ್ ಎಲ್ಲರ ಆಕರ್ಷಣೆಯಾಗಿತ್ತು. ಅದನ್ನುನೋಡಲು ಪುಟಾಣಿಗಳು ಸೇರಿದಂತೆ ಎಲ್ಲ ವಯೋಮಾನದವರು ಮುಗಿಬಿದ್ದಿದ್ದರು. ಆ ಕೇಕ್ ಎದುರು ನಿಂತ ಜನರುಕೈಯಲ್ಲಿ ಮೊಬೈಲ್ಗಳನ್ನು ಹಿಡಿದು ತಾ ಮುಂದು ನಾ ಮುಂದು ಎನ್ನುತ್ತಲೇ ಸೆಲ್ಫಿ ಕ್ಲಿಕ್ಕಿಸುತ್ತಿದ್ದರು.

ರಣವೀರ್ ರೂಪವು ಶೇರ್ವಾನಿ ಉಡುಪಿನ ಲುಕ್ನಲ್ಲಿ ಮಿಂಚುತ್ತಿದ್ದರೆ, ದೀಪಿಕಾ ರೂಪವು ಚಿನ್ನದ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿತ್ತು.

ನಾಲ್ಕು ಅಡಿ ಎತ್ತರವಿದ್ದ ಅವರಿಬ್ಬರ ಕ್ಯಾರಿಕೇಚರ್ ಕೇಕ್, ಅಗಲವೂ ಅಷ್ಟೇ ಇತ್ತು. ಎತ್ತರ ನಾಲ್ಕೂವರೆ ಇದೆ. 110 ಕೆಜಿ ತೂಕವಿದ್ದ ಅದನ್ನು ವೀಕ್ಷಿಸುತ್ತಿದ್ದವರ ಮೊಗದಲ್ಲಿ ನಗು ಮೂಡುತ್ತಿತ್ತು.

ಫಾಂಡಂಟ್, ಫ್ಲೆಕ್ಸಿಬಲ್ ಎಡಿಬಲ್ ಫ್ಯಾಬ್ರಿಕ್, ರೈಸ್ ಕ್ರಿಸ್ಪಿ, ಗಮ್ ಪೇಸ್ಟ್ ಹಾಗೂ ಫುಡ್ ಕಲರ್ ಬಳಸಿ ಈ ಕೇಕ್ ರಚಿಸಲಾಗಿದೆ. 18 ವರ್ಷಗಳಿಂದ ಕೇಕ್ ಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿರುವ ಸಂಸ್ಥೆ ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ (ಐಬಿಸಿಎ). ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹಲವು ಕಡೆ ವಿಭಿನ್ನವಾಗಿ ಕೇಕ್ಗಳನ್ನು ರಚಿಸಿ ಗುರುತಿಸಿಕೊಳ್ಳುತ್ತಿದ್ದಾರೆ.

‘ಕೇಕ್ ಶೋ ನಡೆಯುತ್ತಿರುವ ಬಗ್ಗೆ ಗೊತ್ತಿತ್ತು. ಹೀಗಾಗಿ ಇಲ್ಲಿಗೆ ಮಗಳು ಅಹನಾಳ ಜೊತೆಗೆ ಬಂದೆ. ಆದರೆ, ಇಲ್ಲಿ ದೀಪಿಕಾ ಹಾಗೂ ರಣವೀರ್ ಅವರ ಕ್ಯಾರಿಕೇಚರ್ ಇದೆ ಎಂಬುದು ನನಗೆ ಗೊತ್ತಿರಲಿಲ್ಲ. ಅದನ್ನು ನೋಡಿ ಖುಷಿಯಾಗಿದೆ. ಅಹನಾ ಸಹ ಸಂತಸಗೊಂಡಿದ್ದಾಳೆ. ಇಡೀ ಕೇಕ್ ಶೋ ದಲ್ಲಿ ಇದು ಆಕರ್ಷಕವಾಗಿದೆ’ ಎಂದರು ಯಲಹಂಕದ ಶೋಭಾ.

‘ಕೇಕ್ ಶೋಗೆ ಬರುವವರನ್ನುವಿನೂತನ ಪ್ರಯೋಗದಿಂದ ಮನ ಸೆಳೆಯಬೇಕೆಂಬ ಬಯಕೆ ನಮ್ಮದು. ದೀಪಿಕಾ ರಣವೀರ್ ಈತ್ತೀಚೆಗಷ್ಟೇ ಮದುವೆ ಆಗಿದ್ದರು. ಅವರ ಪ್ರತಿಕೃತಿಯನ್ನು ಕ್ಯಾರಿಕೇಚರ್ ಕೇಕ್ ರೂಪದಲ್ಲಿ ತಯಾರಿಸಿದರೆ ಹೇಗೆ ಎಂದು ಯೋಚಿಸಿ, ವಿದ್ಯಾರ್ಥಿಗಳು ಇದನ್ನು ಸೃಷ್ಟಿಸಿದ್ದಾರೆ’ ಎಂದರು ಐಬಿಸಿಎನ ಶಿಕ್ಷಕ ಅರುಣ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.