ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ನಾಟಕ ಶಾಲೆ ರಂಗೋತ್ಸವ ಇಂದಿನಿಂದ

Published 16 ಫೆಬ್ರುವರಿ 2024, 18:29 IST
Last Updated 16 ಫೆಬ್ರುವರಿ 2024, 18:29 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರವು ವಸುದೈವ ಕುಟುಂಬಕಂ–ವಂದೇ ಭಾರಂಗಮ್’ ಎಂಬ ಧ್ಯೇಯವಾಕ್ಯದೊಂದಿಗೆ ‘25ನೇ ಭಾರತ ರಂಗ ಮಹೋತ್ಸವ’ ಹಮ್ಮಿಕೊಂಡಿದೆ. ಫೆ. 17ರಿಂದ 21ರವರೆಗೆ ನಡೆಯಲಿದೆ.

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಆವರಣದಲ್ಲಿ ನಡೆಯುವ ರಂಗೋತ್ಸವಕ್ಕೆ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಶನಿವಾರ ಚಾಲನೆ ನೀಡಲಿದ್ದಾರೆ. ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ ಭೂಸನೂರಮಠ ಉಪಸ್ಥಿತರಿರಲಿದ್ದಾರೆ.

ಫೆ.17ರಂದು ಸುಶೀಲ್ ಶರ್ಮಾ ಮತ್ತು ತಂಡದಿಂದ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ರಂಗ ಸಂಗೀತ ಕಾರ್ಯಕ್ರಮ ನಡೆಯಲಿದೆ.

ನಾಟಕಗಳು: ಫೆ. 18ರಂದು ಎಸ್‌.ವಿ. ಸುಷ್ಮಾ ನಿರ್ದೇಶನದ ‘ಮಜಾ ಮಜಾ ದೋ’, 19ರಂದು ದಿನೇಶ್ ಕುಮಾರ್ ನಿರ್ದೇಶನದ ‘ಐ ವಾಂಟ್‌ ಟು ಸ್ಪೀಪ್’, 20ರಂದು ಶುಭಾ ಭಟ್‌ ಬಾಷೀನ್‌ ನಿರ್ದೇಶನದ ‘ಜಿಂಕ್ಸಡ್‌ ಆರೆಂಜಸ್‌’, 21ರಂದು ಯಕ್ಷಗಾನ ಕೇಂದ್ರಿತ ಸಹನಾ ಟಿರಕಿ ಅವರ ಏಕವ್ಯಕ್ತಿ ರಂಗ ಪ್ರದರ್ಶನ ಪ್ರಸ್ತುತ ಪಡಿಸಲಿದ್ದಾರೆ. ನಯಾ ಸಫರ್‌ ಏಕವ್ಯಕ್ತಿ ಪ್ರದರ್ಶನವನ್ನು ದುರ್ಗಾ ಪ್ರಸಾದ್ ಚಿಕ್ಕಮ್ ಪ್ರಸ್ತುತಪಡಿಸಲಿದ್ದಾರೆ. ಪ್ರತಿದಿನ ಸಂಜೆ 7 ಗಂಟೆಗೆ ಪ್ರದರ್ಶನಗಳಿದ್ದು, ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT