ಕೆಲ ವರ್ಷಗಳ ಹಿಂದೆ ಜಪಾನಿ ಸ್ನೇಹಿತೆಯನ್ನು ಭೇಟಿಯಾದಾಗ, ಆಕೆ ತನ್ನ ಊರಿನ ವಿಶೇಷತೆಗಳನ್ನು ಹಂಚಿಕೊಂಡಳು. ‘ನಮ್ಮ ಊರಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಗ್ಯೋದಾ ನಗರದಲ್ಲಿ ನಡೆಯುವ ‘ರೈಸ್ ಫೀಲ್ಡ್ ಆರ್ಟ್’ ನಿಜಕ್ಕೂ ವಿಶಿಷ್ಟ. ವಿವಿಧ ಬಣ್ಣದ ಭತ್ತದ ತಳಿಗಳಿಂದ ಗದ್ದೆಯಲ್ಲಿ ಮೂಡುವ ಅದ್ಭುತವಾದ ಕಲೆಯನ್ನು ಒಮ್ಮೆ ನೋಡಲೇಬೇಕು’ ಎಂದಳು. ಆಕೆಯ ಈ ಮಾತಿನ ಬಳಿಕ ಕಳೆದ ಮೂರು ವರ್ಷಗಳಿಂದ ತಪ್ಪದೇ ಈ ಭತ್ತದ ಕಲೆ ನೋಡಲು ಹೋಗುತ್ತಿದ್ದೇನೆ.
ರೈಸ್ ಫೀಲ್ಡ್ ಆರ್ಟ್ ನೋಡಲು ಈ ಗೋಪುರವೇರಬೇಕು...
ರೈಸ್ ಫೀಲ್ಡ್ ಆರ್ಟ್ ನೋಡುತ್ತಿರುವ ಪ್ರವಾಸಿಗರು
ಕಲೆ ಸೃಷ್ಟಿಸಲು ಹೀಗೆ ಗದ್ದೆಗಿಳಿದು ನಿಗದಿತ ಚೌಕದೊಳಗೆ ಸಸಿಗಳನ್ನು ನೆಡಬೇಕು