ಬೆಂಗಳೂರು: ಗಿರಿನಗರದ ಮೃದಂಗ ವಿದ್ವಾನ್ ರವಿಶಂಕರ್ ಶರ್ಮಾಅವರ ಶೃತಿಸಿಂಧೂರ ಅಕಾಡೆಮಿಯ ಆಶ್ರಯದಲ್ಲಿ ನಡೆದ ಸಂಸದ ತೇಜಸ್ವಿಸೂರ್ಯಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ಗಾಯನ ಕಛೇರಿ ಕಿಕ್ಕಿರಿದು ನೆರೆದಿದ್ದ ಸಂಗೀತಪ್ರಿಯರ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಎಂದಿನಂತೆ ಪಿಟೀಲು, ತಬಲ ಮತ್ತು ಮೃದಂಗ(ರವಿಶಂಕರ ಶರ್ಮಾ ಅವರ ಸುಪುತ್ರ) ಸಹಕಾರದೊಂದಿಗೆ ತಾವೇ ಚಿಟಿಕೆಗಳು ಮತ್ತು ತಾಳಗಳನ್ನು ಬಳಸಿಕೊಂಡು ಭಕ್ತಿಮಯ ವಾತಾವರಣವನ್ನು ಶಿವಶ್ರೀ ಸೃಷ್ಟಿಸಿದ್ದು ಸಭಿಕರಿಂದ ಮಾನ್ಯವಾಯಿತು.

ಅವರ ಗಾಯನಶೈಲಿಯಲ್ಲಿ ಕರ್ನಾಟಕ, ಹಿಂದೂಸ್ತಾನೀ, ಜಾನಪದ ಇತ್ಯಾದಿ ಸಕಲ ಸಂಗೀತಕಲೆಗಳ ಅನೇಕಾನೇಕ ಅಂಶಗಳು ತುಂಬಿದ್ದವು. ನೈಜ ಹಾಗೂ ಮೌಲಿಕವಾದ ಅವರ ಗಾಯನ ಶೈಲಿಯನ್ನು “ಶಿವಶ್ರೀ ತೇಜಸ್ವಿ ಶೈಲಿ” ಅಂತಲೇ ಹೆಸರಿಸಬಹುದೇನೋ??

ಮೂರುವರೆ ಸ್ಥಾಯಿಗಳನ್ನೂ ಆವರಿಸಬಲ್ಲ ಸುಮಧುರ ಕಂಠದ ಆಕರ್ಷಕ ಶಾರೀರ. ರಚನೆಗಳ ಸಾಹಿತ್ಯದ ಸ್ಪಷ್ಟ ಮತ್ತು ಆಯಾ ಭಾವ-ಪ್ರೇಷಕ ನುಡಿಕಾರ. ವಿವಿಧ ಸಂಗೀತ ಶೈಲಿಗಳ ಅಲಂಕರಣಗಳ ಮೈಳೈಕೆ ಹೊಸ ಅನುಭವವನ್ನೀಡಿತು. ಅವರ ಬೋಲ್ತಾನ್ಗಳು(ಪಲುಕುಗಳು) ಬೋಲ್ಆಲಾಪ್ಗಳು, ಗಾಯನದಲ್ಲಿ ತನ್ಮಯತೆ, ಕೇಳುಗರನ್ನು ಸಹಗಾಯನಕ್ಕೆ ಪ್ರೇರೇಪಿಸಿದ್ದು, ಭಾವಕ್ಕನುಗುಣವಾಗಿ ಚಿಟಿಕೆಗಳು ಮತ್ತು ತಾಳಗಳ ಉಪಯೋಗ ಎಲ್ಲವೂ ಗಮನಾರ್ಹ. ಒಟ್ಟಾರೆ ಅದೊಂದು ವಿವಿಧ ಶೈಲಿಗಳ ಪೂರ್ಣ ಪ್ರಮಾಣದ ಭಕ್ತಿ ಗಾಯನ.

ಈ ಹಿನ್ನೆಲೆಯಲ್ಲಿ ಅವರು ಅಂದು ಹಾಡಿದ ನಾರಾಯಣ ನಾರಾಯಣ ಜೈ ಜೈ, ಸಂಕ್ಷಿಪ್ತ ರಾಗಾಲಾಪನೆಯೊಂದಿಗೆ ಜಯಜಯಸ್ವಾಮಿನ್, ಗುರುಕೃಪಾಅಂಜನ್(ಕಬೀರ್), ಪಿಬರೇ ರಾಮರಸಂ(ಸದಾಶಿವ ಬ್ರಹ್ಮೇಂದ್ರ), ಜಗದೋಧಾರನ, ಮುಂತಾದ ಸಂಸ್ಕೃತ, ಕನ್ನಡ, ಹಿಂದಿ, ತಮಿಳ್ ಭಾಷೆಗಳ ಭಜನ್, ಗೀತೆಗಳು ಮತ್ತು ರಚನೆಗಳು ಹೃದಯಂಗಮವಾಗಿದ್ದವು. ಪ್ರತ್ಯೇಕವಾದ ರಾಗಾಲಾಪನೆ, ಕಲ್ಪನಾಸ್ವರವಿನ್ಯಾಸ ಮುಂತಾದ ಮನೋಧರ್ಮ ಸಂಗೀತಾಂಶಗಳು ಸಭಾ-ಕಛೇರಿಯ ಮೆರಗನ್ನು ಮತ್ತಷ್ಟು ಹೆಚ್ಚಿಸಬಹುದು.

ಬೆಳಗಿದ ದೀಪಾರಾಣಿ

ಸಕ್ರಿಯವಾಗಿರುವ ನೃತ್ಯ ದಿಶಾ ಟ್ರಸ್ಟ್ನ ಗುರು ಡಾ.ದರ್ಶಿನಿ ಮಂಜುನಾಥ್ ಮತ್ತೊಮ್ಮೆ ಸೊಗಸಾಗಿ ಸ್ಪಂದಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ತಮ್ಮ ಶಿಷ್ಯೆ ಎಸ್.ದೀಪಾರಾಣಿ ರಂಗಪ್ರವೇಶದಲ್ಲಿ ಗೆಲುವಿನ ನಗೆ ಬೀರಿದರು. ಸ್ವತಃ ದರ್ಶಿನಿ ಅವರ ಪ್ರೇರಕ ನಟುವಾಂಗ ಹಾಗೂ ಭಾರತೀ ವೇಣುಗೋಪಾಲ್, ಹೆಚ್. ಎಸ್. ವೇಣುಗೋಪಾಲ್, ಗಿರಿಧರ್ ಮುಂತಾದ ಹಿರಿಯ ಸಂಗೀತಗಾರರ ಫಲಪ್ರದ ಸಹಕಾರದೊಂದಿಗೆ ನಡೆದ ದೀಪಾರಾಣಿ ಪ್ರದರ್ಶನದಲ್ಲಿ ಕಲೆಯ ವಿವರಗಳು ಸಾಂದ್ರವಾಗಿ ಕಾಣಬಂದವು.

ಸಾಂಪ್ರದಾಯಿಕ ಪುಷ್ಪಾಂಜಲಿ, ಅಷ್ಟದಿಕ್ಪಾಲಕ(ಎಂಟುದಿಕ್ಕುಗಳ) ವಂದನೆ ಹಾಗೂ ಗಿರಿಧರ್ ರಚಿತ ಗಣೇಶ ಸ್ತುತಿ( “ಆರುಮುಖದ ಅಣ್ಣನೇ”, ತ್ರಿಶ್ರಗತಿಯ ಪೋಷಣೆ)ಯಲ್ಲಿ ಅವರು ಮೂಡಿಸಿದ ದೈಹಿಕವಿನ್ಯಾಸಗಳು ಆಕರ್ಷಿಸಿದವು. ಗಿರಿಧರ್ಅವರ ಜತಿಗಳು ಶಾಸ್ತ್ರೋಕ್ತವೂ, ಲಯಪೂರಿತವೂ ಮತ್ತು ಕಲಾಮಯವೂ ಆಗಿದ್ದವು. ನಾರಾಯಣನ ವೈಶಿಷ್ಟ್ಯಗಳನ್ನು ಕುರಿತಾದ ಸಂತ ತ್ಯಾಗರಾಜರ ಪ್ರಹ್ಲಾದ ಚರಿತಂನಿಂದ ಆಯ್ದುಕೊಂಡ “ಜಯತುಜಯತುಸಕಲ ನಿಗಮಾಗಮ”(ಆರಭಿ) ರಚನೆ ಚೂರ್ಣಿಕೆಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದು ಪ್ರಶಂಸಾರ್ಹ.

ಮುಂದಿನ ಶಬ್ದದಲ್ಲಿ ಮಹಾಭಾರತದ ಪ್ರಧಾನ ಕಥಾಂಶಗಳು ದೀಪಾರಾಣಿಯ ಉತ್ತಮ ಅಭಿನಯದಲ್ಲಿ ಅನಾವರಣಗೊಂಡವು. ಕ್ಲಿಷ್ಟಕರ ಜತಿಗಳು, ನೃತ್ತದ ಬಿಗಿ ಹಂದರ, ನೃತ್ಯ ಮತ್ತು ಅಭಿನಯದ ಉತ್ಕೃಷ್ಟ ಅಭಿವ್ಯಕ್ತಿಯಿಂದ ಅಂದಿನ ವರ್ಣದಲ್ಲಿ ಭಕ್ತಿರಸದ ಪರಿಪಾಕವೇ ತಯಾರಾಯಿತು. ಶ್ರೀಕೃಷ್ಣನ ವಿವಿಧ ನಾಮಗಳನ್ನು ಹೆಣೆದು ರೂಪಿತ ರಾಗಮಾಲಿಕಾವರ್ಣದಲ್ಲಿ ವಿವಿಧ ಭಾವ ಮತ್ತು ರಸಗಳ ಸರಾಗ ನಿರ್ವಹಣೆಯಲ್ಲಿ ದೀಪಾರಣಿಗೆ ಪೂರ್ಣಾಂಕಗಳು ಲಭಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.